ಶರಣಬಸವ ಸೈದಾಪುರ ಅವರಿಗೆ ಕನಕದಾಸ ಪ್ರಶಸ್ತಿ

ಶಹಾಪುರ: ಮಾ.13: ಪಟ್ಟಣದ ಚಾಮುಂಡೇಶ್ವರಿ ನಗರದ ಮಾತೃಛಾಯ ಶಿಕ್ಷಣ ಸಂಸ್ಥೆ ಪ್ರತಿ ವರ್ಷ ಕೊಡಮಾಡುವ ಕನಕದಾಸ ಪ್ರಶಸ್ತಿಯನ್ನು ಈ ವರ್ಷ ಶಿಕ್ಷಣ ಪ್ರೇಮಿಗಳು ಸಾಹಿತ್ಯ ಚಿಂತಕರು ಉತ್ತಮ ಸಂಘಟಕರು ಸಮಾಜ ಸೇವಕರು ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀ ಶರಣಬಸವ ಪೆÇಲೀಸ್ ಬಿರಾದಾರ ಸೈದಾಪುರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ತಿಪ್ಪಣ್ಣ ಖ್ಯಾತನಾಳ ಪತ್ರಿಕೆ ಪ್ರಕಟನೆ ತಿಳಿಸಿದ್ದಾರೆ ಶರಣಬಸ ಪೆÇೀಲಿಸ್ ಬಿರಾದಾರ ಸಾ ಸೈದಾಪುರ ಅವರು ಮೂಲತ ಒಬ್ಬ ಉತ್ತಮ ಶಿಕ್ಷಕರಾಗಿ ಹತ್ತು ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ತದನಂತರ ಅವರು ಶಿಕ್ಷಕ ವೃತ್ತಿ ಬಿಟ್ಟು ಗುತ್ತಿಗೆದಾರರಾಗಿ ಸೇವೆ ಮಾಡಲು ಪ್ರಾರಂಭಿಸಿದರು ನಂತರ ಸಮಾಜ ಸೇವೆ ಮಾಡಲು ಪ್ರಾರಂಭಿಸಿದರು ಅವರದೇ ಆದ ಹೊಸಬೆಳಕು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಟ್ಟಿಕೊಂಡು ಜಿಲ್ಲೆಯಾದ್ಯಂತ ಸಂಸ್ಥೆಯ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕೆಲಸ ಕಾರ್ಯಗಳು ಮಾಡುತ್ತಿದ್ದಾರೆ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಪ್ಯಾಡು ಪೇನು ನೋಟ ಬುಕ್ ಹತ್ತನೇ ವಿದ್ಯಾರ್ಥಿಗಳಿಗೆ ಆರು ವಿಷಯಳ ಕಾರ್ಯಾಗಾರವನ್ನು ಮಾಡಿಸಿ ಫಲಿತಾಂಶ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ ಹೀಗೆ ಹಲವಾರು ಸಾಹಿತ್ಯಾಸಕ್ತರಿಗೆ ಗುರುತಿಸು ಕಾರ್ಯಕ್ರಮ ಮಾಡುತ್ತಿದ್ದಾರೆ .ಇವರ ಸೇವೆಯನ್ನು ಗುರುತಿಸಿ ಈ ವರ್ಷ ಅವರಿಗೆ ನಮ್ಮ ಸಂಸ್ಥೆಯ ವತಿಯಿಂದ ಶ್ರೀ ಕನಕದಾಸ ಪ್ರಶಸ್ತಿಯನ್ನು ಕೊಡುತ್ತೇವೆ ಎಂದು ಹೇಳಿದರು.ಕನಕದಾಸ ಪ್ರಶಸ್ತಿ ಪಡೆದ ಸಲುವಾಗಿ ಅವರ ಆಪ್ತ ವಲಯದ ಸ್ನೇಹಿತರಾದ ಸಿದ್ದಣ್ಣ ಟಣಕೆದಾರ, ಮಲ್ಲಿಕಾರ್ಜುನ ಕರಿಗುಡ್ಡ, ದೇವಿಂದ್ರಪ್ಪ ಮೇಟಿ, ನಿಂಗಣ್ಣ ಹೊಸಮನಿ, ಭೀಮರಾಯ ಬಡಿಗೇರ, ಅಂಬ್ರೇಶ ಸಜ್ಜನ, ನಾನೇಗಡ ಮೇಟಿ , ಸಾಯಿಬಣ್ಣ ಪುರ್ಲೆ , ಶ್ರೀಶೈಲ ಬಿರಾದಾರ, ರುದ್ರಗೌಡ ಪಾಟೀಲ್ ಮಲ್ಲಾಬಾದಿ, ಗುರುರಾಜ ದೇವಾಪುರ, ಹರ್ಷ ವ್ಯಕ್ತಪಡಿಸಿದರು