ಶರಣಬಸವ ವಿಶ್ವವಿದ್ಯಾಲಯ ಶಿಕ್ಷಣ ಮಾತ್ರವಲ್ಲದೇ ಅದರ ಮೌಲ್ಯಗಳನ್ನು ಎತ್ತಿ ಹಿಡಿದಿದೆ: ಪಾಟೀಲ ಭುವನೇಶ

ಕಲಬುರಗಿ,ಜು.29: ಪೂಜ್ಯ ಡಾ. ಅಪ್ಪಾಜಿಯವರು ಅನ್ನದಾಸೋಹ ಮಾತ್ರವಲ್ಲದೇ ಶಿಕ್ಷಣ ದಾಸೋಹಕ್ಕೂ ಒತ್ತು ನೀಡಿದ್ದಾರೆ. ಶರಣಬಸವ ವಿಶ್ವವಿದ್ಯಾಲಯದಲ್ಲಿ 20ಕ್ಕೂ ಹೆಚ್ಚು ವಿಭಾಗಗಳಿದ್ದು, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಮೂಲಕ ತಮ್ಮ ಕನಸುಗಳನ್ನು ನನಸಾಗಿ ಮಾಡಲು ಹೊರಟಿರುವುದು ಸಂತಸದ ವಿಷಯ. ಈ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮಾತ್ರವಲ್ಲದೆ ಅದರ ಮೌಲ್ಯಗಳನ್ನು ಎತ್ತಿ ಹಿಡಿದಿರುವುದು ಕಾಣಸಿಗುತ್ತದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಶ್ರೀ ಪಾಟೀಲ ಭುವನೇಶ ದೇವಿದಾಸ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯನ್ನು ಉಧ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಮತ್ತು ಪ್ರಯತ್ನದಿಂದ ಜೀವನದಲ್ಲಿ ಸಫಲರಾಗಲು ಸಾಧ್ಯ . ಗುರುಗಳ ಮಾರ್ಗದರ್ಶನದಲ್ಲಿ ಪ್ರಾಮಾಣಿಕತೆಯಿಂದ ಪ್ರಯತ್ನ ಮಾಡಿ, ಕಠಿಣ ಪರಿಶ್ರಮದಿಂದ ಹೆಚ್ಚುವರಿ ಪಠ್ಯಕ್ರಮದೊಂದಿಗೆ ತಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕೆಂದು ಕಿವಿಮಾತನ್ನು ಹೇಳಿದರು.
ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ, ತಮ್ಮ ಪ್ರಯತ್ನದಿಂದ, ಗುರಿಯ ಕಡೆಗೆ ನುಗ್ಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ನಮ್ಮ ಗುರಿಗಳು ಬದಲಾಗಬಹುದು ಆದರೆ ನಿರಂತರವಾಗಿ ಸಫಲರಾಗುವವರೆಗೆ ಪ್ರಯತ್ನಿಸಬೇಕು. ಕಠಿಣ ಪರಿಶ್ರಮವಲ್ಲದೆ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶರಣಬಸವ ವಿಶ್ವವಿದ್ಯಾಲಯವು 29 ಜುಲೈ 2017ರಂದು ಅಸ್ತಿತ್ವಕ್ಕೆ ಬಂದು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಈ ವಿವಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು ಆಧ್ಯಾತ್ಮಿಕತೆಯಲ್ಲಿಯೂ ಮುಂಚೂಣಿಯಲ್ಲಿದೆ, ಇದಕ್ಕಾಗಿ ನಾವು ನೀವೆಲ್ಲರೂ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಡಾ. ಅವ್ವಾಜಿಯವರಿಗೆ ಕೃತಜ್ಞತೆ ಸಲ್ಲಿಬೇಕೆಂದರು.
ಇದೇ ಸಂಧರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ ಕುರಿತು ಒಂದು ದಿನದ ಕಾರ್ಯಗಾರ ಏರ್ಪಡಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಏಖಇಆಐನ ಪ್ರೊಜೆಕ್ಟ ಇಂಜಿನಿಯರ್ ಶ್ರೀ ದಿನೇಶಕುಮಾರ ಡಿ ಕೆ ಭಾಗವಹಿಸಿ ಮಾತನಾಡಿದರು.
ಕಲ್ಲಿದ್ದಲು, ಡೀಸೆಲ್, ತೈಲದ ವಿವಿಧ ಸಂಪನ್ಮೂಲಗಳ ಮೂಲಕ ನಾವು ಪಡೆಯುತ್ತಿರುವ 400200 ಮೆಗಾ ವ್ಯಾಟ್ ವಿದ್ಯುತ್ ನಿಮಗೆ ಚೆನ್ನಾಗಿ ತಿಳಿದಿದೆ, ನವೀಕರಿಸಬಹುದಾದ ಇಂಧನ ಶಕ್ತಿಯ ಮೂಲಕ ಕೇವಲ 39% ವಿದ್ಯುತ್ ಪಡೆಯುತ್ತಿದ್ದೇವೆ, ಅಂದರೆ ಭಾರತದಾದ್ಯಂತ ನವೀಕರಿಸಬಹುದಾದ ಇಂಧನದಿಂದ ನಾವು ಪಡೆಯುತ್ತಿರುವುದು 113000 ಮೆಗಾ ವ್ಯಾಟ್ ವಿದ್ಯುತ್ ಮಾತ್ರ ಎಂದು ಹೇಳಿದರು.
ತಮ್ಮ ಮಾತುಗಳನ್ನು ಮುಂದುವರೆಸಿದ ದಿನೇಶಕುಮಾರ, ಕರ್ನಾಟಕದಲ್ಲಿ 30200 ಮೆಗಾ ವ್ಯಾಟ್ ಶಕ್ತಿಯು ಸುಮಾರು 55% ನಷ್ಟು ಇಂಧನ ಶಕ್ತಿಯನ್ನು ನವೀಕರಿಸಬಹುದಾದ ಮೂಲಗಳಿಂದ ನಾವು ಪಡೆಯುತ್ತಿದ್ದೇವೆ. ಕೇಂದ್ರ ಸರ್ಕಾರವು ಸೌರ ನವೀಕರಿಸಬಹುದಾದ ಇಂಧನ ನೀತಿಯನ್ನು ಘೋಷಿಸಿದೆ, 500 ಗಿಗಾ ವ್ಯಾಟ್‍ನಷ್ಟು ವಿದ್ಯುತ್ ನಾವು ಉಳಿಸಲು ಯೋಚಿಸುತ್ತಿದ್ದೇವೆ. ಇದಕ್ಕಾಗಿ ನಾವು ಕರ್ನಾಟಕದಾದ್ಯಂತ 10 ಇಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಿದ್ದೇವೆ ಅದರಲ್ಲಿ ಶರಣಬಸವ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜು ಕೂಡಾ ಒಂದು. ವಿದ್ಯುತ್ ಅನ್ನು ಮಿತವಾಗಿ ಬಳಸಬೇಕು ಮತ್ತು ಇದರ ಬಗ್ಗೆ ಬೇರೆಯವರಲ್ಲಿಯೂ ಅರಿವು ಮೂಡಿಸಬೇಕು. ಪಾವಗಢದಲ್ಲಿ ಅತಿದೊಡ್ಡ ಸೌರಶಕ್ತಿ ಯೋಜನೆ ಕೈಗೊಂಡಿದ್ದು, ಸೌರಶಕ್ತಿ ಉತ್ಪಾದನೆಯಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಶರಣಬಸವ ವಿಶ್ವವಿದ್ಯಾಲಯದಲ್ಲಿ ಮೇಲ್ಛಾವಣಿ ಮೇಲೆ ಸೌರಶಕ್ತಿ ಪ್ಯಾನಲ್ಸ ಅಳವಡಿಸಿ ಸುಮಾರು 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿರುವುದು ತಿಳಿದು ಅತಿ ಸಂತೋಷವಾಗಿದೆ ಎಂದರು.
ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ ವಿ ನಿಷ್ಠಿ ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದರು. ಇದೇ ಸಂಧರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರ ಜನ್ಮದಿನಾಚರಣೆ ಸಮಾರಂಭವು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ 2021-22 ರ ಶೈಕ್ಷಣಿಕ ವರ್ಷದಲ್ಲಿ ಪಿಎಚ್.ಡಿ ಪೂರೈಸಿದ ಅಧ್ಯಾಪಕರಿಗೆ ಸನ್ಮಾಲಿಸಲಾಯಿತು. ಈ ಶೈಕ್ಷಣಿಕ ವರ್ಷದಲ್ಲಿ ವಿವಿಧ ವಿಭಾಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಸನ್ಮಾಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಸಮಕುಲಪತಿ ಡಾ. ವಿ ಡಿ ಮೈತ್ರಿ, ಕುಲಸಚಿವ (ಮೌಲ್ಯಮಾಪನ) ಡಾ. ಬಸವರಾಜ ಮಠಪತಿ, ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಡೀನ್ ಡಾ. ಶಿವಕುಮಾರ ಜವಳಗಿ, ಡಾ. ಎಸ್ ಜಿ ಡೊಳ್ಳೆಗೌಡರ್, ಡಾ. ಶಶಿಕಲಾ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಬಸವನಗೌಡ ರೋಣದ, ಮಾಲಿನಿ ಶಿವಕುಮಾರ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಪ್ರೊ. ಶೃತಿ ಪಾಟೀಲ ನಿರೂಪಿಸಿದರು. ಡಾ. ಅನಿಲಕುಮಾರ ಬಿಡವೆ ಸ್ವಾಗತಿಸಿದರು ಮತ್ತು ಪ್ರೊ.ಜಗದೀಶ ಪಾಟೀಲ ವಂದನಾರ್ಪಣೆ ಸಲ್ಲಿಸಿದರು.