ಶರಣಬಸವ ವಿಶ್ವವಿದ್ಯಾಲಯ ಇಷ್ಟೊಂದು ಹೆಮ್ಮರವಾಗಿ ಬೆಳೆಯಬೇಕಾದರೆ ತಮ್ಮೆಲ್ಲರ ಪ್ರಯತ್ನದಿಂದ ಸಾಧ್ಯವಾಗಿದೆ : ಡಾ. ದಾಕ್ಷಾಯಿಣಿ ಅವ್ವಾಜಿ

ಕಲಬುರಗಿ,ಜು.29: ಜುಲೈ ತಿಂಗಳ 9ರಂದು ನೇಪಾಳದಲ್ಲಿ ಬಸವದಳದ ವತಿಯಿಂದ ಕೊಡಮಾಡಿದ “ದಾಸೋಹ ರತ್ನ” ಪ್ರಶಸ್ತಿಗೆ ಭಾಜನರಾದ ಮಾತೋಶ್ರಿ ಡಾ. ದಾಕ್ಷಾಯಿಣಿ ಅವ್ವಾಜಿಯವರಿಗೆ ಶರಣಬಸವ ವಿಶ್ವವಿದ್ಯಾಲಯದಿಂದ ದಾಸೋಹ ಮಹಾಮನೆಯಲ್ಲಿ ಶುಕ್ರವಾರ ಸಾಯಂಕಾಲ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಅವ್ವಾಜಿ, ಈ ಪ್ರಶಸ್ತಿಯು ಶರಣಬಸವೇಶ್ವರ ಸಂಸ್ಥಾನದ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಸಿಬ್ಭಂದಿ ವರ್ಗಕ್ಕೆ ಸಮರ್ಪಿಸುತ್ತೇನೆ ಎಂದರು. ಶರಣಬಸವ ವಿಶ್ವವಿದ್ಯಾಲಯ ಇಷ್ಟೊಂದು ಹೆಮ್ಮರವಾಗಿ ಬೆಳೆಯಬೇಕಾದರೆ ತಮ್ಮೆಲ್ಲರ ಸತತ ಪ್ರಯತ್ನದಿಂದ ಮಾತ್ರ ಸಾಧ್ಯವಾಗಿದ್ದು, ತಮ್ಮೆಲ್ಲರ ಸಹಕಾರ ಹೀಗೆ ಮುಂದುವರೆಯಲಿ ಹಾಗೂ ವಿಶ್ವವಿದ್ಯಾಲಯ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು. ಪೂಜ್ಯ ಶರಣರ ಆಶೀರ್ವಾದ, ಪೂಜ್ಯ ಡಾ. ಅಪ್ಪಾಜಿಯವರ ಮಾರ್ಗದರ್ಶನದಿಂದ ಶಿಕ್ಷಣ ದಾಸೋಹ ಸೇವೆಗೆ ಸದಾ ಸಿದ್ಧವಾಗಿದ್ದೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೊಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ ಮಾತನಾಡಿ ಡಾ. ದಾಕ್ಷಾಯಿಣಿ ಅವ್ವಾಜಿಯವರಿಗೆ ದಾಸೋಹ ರತ್ನ ಪ್ರಶಸ್ತಿ ಬಂದಿರುವುದು ಬಹಳ ಸಂತಸ ತಂದಿದೆ. ತಾವೆಲ್ಲರೂ ಭಕ್ತಿಯಿಂದ ಸನ್ಮಾನಿಸಿದ್ದು ಸಂತೋಷದ ವಿಚಾರ. ಶರಣಬಸವ ವಿಶ್ವವಿದ್ಯಾಲಯದಲ್ಲಿ ಇನ್ನೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಡಾಕ್ಟರೇಟ್ ಪದವಿ ಪಡೆಯಬೇಕೆಂದು ಆಶಿಸಿದರು.
ಈ ಸರಳ ಸಮಾರಂಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಹಾಗೂ ಡಾ. ಉಮಾ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಿ ನಿಷ್ಠಿ, ಸಮಕುಲಪತಿ ಡಾ. ವಿ ಡಿ ಮೈತ್ರಿ, ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಕುಲಸಚಿವ ಮೌಲ್ಯಮಾಪನ ಡಾ. ಬಸವರಾಜ ಮಠಪತಿ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಸೇರಿದಂತೆ ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಭಂಧಿ ವರ್ಗದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಕನ್ನಡ ವಿಭಾಗದ ಡಾ. ಚಿದಾನಂದ ಚಿಕ್ಕಮಠ ನಿರೂಪಿಸಿದರು. ಡಾ. ಸಾರಿಕಾದೇವಿ ಕಾಳಗಿ ಸ್ವಾಗತಿಸಿದರು. ಡಾ. ಸುಮಂಗಲಾ ರೆಡ್ಡಿ ವಂದಿಸಿದರು.