
ಕಲಬುರಗಿ: ಸೆ.3:ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಕಾಯದ ವತಿಯಿಂದ ರವಿವಾರದಂದು ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿ “ಸರಕು ಮಾರುಕಟ್ಟೆ” ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.
ಈ ವಿಚಾರ ಸಂಕಿರಣವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸುನೀಲ ಕಟ್ಕೆ, ಕೋಟಕ್ ಸ್ಯೆಕ್ಯೂರಿಟಿಸ್ ಲಿಮಿಟೆಡ್, ಮುಂಬೈ ಇವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲ ಕುಮಾರ ಬಿಡವೆ, ವ್ಯವಹಾರ ಅಧ್ಯಯನ ನಿಕಾಯದ ಡಾ. ಎಸ್. ಎಚ್. ಹೊನ್ನಳ್ಳಿ, ಡಾ. ಬಿ. ಎಸ್. ಹೂಗಾರ, ಡಾ. ವಾಣಿಶ್ರೀ ಸಿ ಟಿ, ಡಾ. ಎಸ್. ಎಚ್. ಶಾಹಾಪುರೆ, ಡಾ. ಆರ್. ಡಿ. ಅವಂತಿ, ಡಾ. ಶಶಿಕಾಂತ ಕೆ, ಪ್ರೊ. ಅರ್ಚನಾ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.