ಶರಣಬಸವ ವಿಶ್ವವಿದ್ಯಾಲಯದಲ್ಲಿ ಎಮ್.ಎಸ್‍ಸಿ ಡಾಟಾ ಸೈನ್ಸ್, ಎಮ್.ಎಸ್‍ಸಿ ಯೋಗ ಸ್ನಾತಕೋತ್ತರ ಕೋರ್ಸ್‍ಗಳು ಪ್ರಾರಂಭ

ಕಲಬುರಗಿ:ಆ.31: 2023-24 ರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಮ್.ಎಸ್‍ಸಿ ಡಾಟಾ ಸೈನ್ಸ್ ಮತ್ತು ಎಮ್.ಎಸ್‍ಸಿ ಯೋಗ ಸ್ನಾತಕೋತ್ತರ ಕೋರ್ಸ್‍ಗಳನ್ನು ಪ್ರಾರಂಭಿಸುವ ಮೂಲಕ ಶರಣಬಸವ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯ ಉದ್ಯೋಗಾವಕಾಶಗಳನ್ನೊಳಗೊಂಡ ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಎರಡು ಹೊಸ ಮಾರ್ಗಗಳನ್ನು ತೆರೆದಿದೆ. ಶರಣಬಸವ ವಿಶ್ವವಿದ್ಯಾಲಯವು ಇಡೀ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಈ ಎರಡೂ ಹೊಸ ಕೋರ್ಸ್‍ಗಳನ್ನು ನೀಡಿದ ಮೊದಲ ವಿಶ್ವವಿದ್ಯಾಲಯವಾಗಿದೆ.

ಕಲಬುರಗಿ ನಗರದಲ್ಲಿ ಬುಧವಾರ ಪ್ರಕಟಣೆಯಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಮಾತನಾಡಿ, ಬಿ.ಟೆಕ್ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸಸ್) ಮತ್ತು ಎರಡು ಹೊಸ ಕೋರ್ಸ್‍ಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರವು ಶರಣಬಸವ ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್ (ಂIಅಖಿಇ) ಈಗಾಗಲೇ ಬಿ.ಟೆಕ್ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸಸ್)ಗೆ ತನ್ನ ಅನುಮೋದನೆಯನ್ನು ನೀಡಿದೆ ಮತ್ತು ವಿಶ್ವವಿದ್ಯಾಲಯವು ಈಗಾಗಲೇ 2022-23 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಆರಂಭಿಸಿಸಲಾಗಿದೆ.

ಡೇಟಾ ಸೈನ್ಸಸ್‍ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟ್ರೀಮ್‍ನ ಆಫ್-ಶೂಟ್ ಸ್ನಾತಕೋತ್ತರ ಕೋರ್ಸ್ ಎರಡು ವರ್ಷಗಳ ಆಗಿದೆ ಮತ್ತು ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಹಿಂದಿಕ್ಕಿದೆ ಮತ್ತು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿರುವ ವಿಶ್ವವಿದ್ಯಾಲಯಗಳಲ್ಲಿಯೂ ವಿದ್ಯಾರ್ಥಿಗಳು ಹೆಚ್ಚು ಬೇಡಿಕೆಯಿರುವ ಕೋರ್ಸ್‍ಗಳಲ್ಲಿ ಒಂದಾಗಿದೆ. ಈ ಕೋರ್ಸ್ ಸಾಫ್ಟ್‍ವೇರ್ ಉದ್ಯಮಗಳಲ್ಲಿ, ವಿಶೇಷವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‍ನ ಉದಯೋನ್ಮುಖ ಪ್ರದೇಶದಲ್ಲಿ ಹೆಚ್ಚಿನ ಸಾಮಥ್ರ್ಯ ಮತ್ತು ಉನ್ನತ ಮಟ್ಟದ ಉದ್ಯೋಗಾವಕಾಶಗಳನ್ನು ನೀಡುತ್ತದೆ.

ಎಮ್.ಎಸ್‍ಸಿ ಯೋಗ ಪೂರ್ಣ ಸಮಯದ ನಿಯಮಿತ ಕೋರ್ಸ್ ಆಗಿದ್ದು ವಿದ್ಯಾರ್ಥಿಗಳಿಗೆ ಸಿದ್ಧಾಂತ, ಪ್ರಾಯೋಗಿಕ ಮತ್ತು ಕ್ಷೇತ್ರ ಕಾರ್ಯಗಳ ಪರಿಪೂರ್ಣ ಮಿಶ್ರಣದೊಂದಿಗೆ ನಾಲ್ಕು ಸೆಮಿಸ್ಟರ್‍ಗಳನ್ನೊಳಗೊಂಡಿದೆ. ಸಾಮಾನ್ಯ ಯೋಗ, ಪ್ರಾಯೋಗಿಕ ಮತ್ತು ಸಿದ್ಧಾಂತ ತರಗತಿಗಳೊಂದಿಗೆ ಪೂರ್ಣ ಪ್ರಮಾಣದ ಆರೋಗ್ಯ ಕೇಂದ್ರದಲ್ಲಿ ಯೋಗ ಪ್ರಾಯೋಗಿಕ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ನುರಿತÀ ಅಧ್ಯಾಪಕರು ಮತ್ತು ತರಬೇತಿ ಪಡೆದ ಆಯುರ್ವೇದ ವೈದ್ಯರು, ಚಿಕಿತ್ಸಕರು ಮತ್ತು ಯೋಗ ಶಿಕ್ಷಕರು ಪ್ರಾಯೋಗಿಕ ಮತ್ತು ಸಿದ್ಧಾಂತ ತರಗತಿಗಳನ್ನು ನಡೆಸುತ್ತಾರೆ. ಶಿಕ್ಷಣ ತಜ್ಞರು, ಬೋಧಕರು, ಯೋಗ ಚಿಕಿತ್ಸಕರು ಮತ್ತು ಆಸ್ಪತ್ರೆಗಳಲ್ಲಿ ಮತ್ತು ಇತರ ಸಂಬಂಧಿತ ಉದ್ಯೋಗಗಳಲ್ಲಿ ಲಾಭದಾಯಕ ಉದ್ಯೋಗಾವಕಾಶಗಳನ್ನು ಈ ಕೋರ್ಸ್ ಒದಗಿಸುತ್ತದೆ.

ಈ ಎರಡು ಹೊಸ ಕೋರ್ಸ್‍ಗಳಿಗೆ ಯಶಸ್ವಿಯಾಗಿ ಅನುಮೋದನೆ ದೊರೆತಿರುವುದಕ್ಕೆ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರು ವಿವಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದರು. ಯೋಗ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಶ್ರಮಿಸಿದ ಸಿಬ್ಬಂದಿಗಳಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಅಭಿನಂದಿಸಿದರು.

ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ ನಿರಂಜನ್ ವಿ ನಿಷ್ಠಿ ಮತ್ತು ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ಈ ಎರಡು ಹೊಸ ಕೋರ್ಸ್‍ಗಳಿಗೆ ಅನುಮೋದನೆ ಪಡೆದ ಸಿಬ್ಬಂದಿಯನ್ನು ಅಭಿನಂದಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಅವರು ಈ ಕೋರ್ಸ್‍ಗಳಿಗೆ ಅನುಮೋದನೆ ಪಡೆಯುವಲ್ಲಿ ತೊಡಗಿರುವ ಎಲ್ಲ ಸಿಬ್ಬಂದಿಗೆ ಶ್ಲಾಘೀಸಿದರು ಮತ್ತು ಈ ಎರಡು ಕೋರ್ಸ್‍ಗಳ ಅನುಮೋದನೆ ಪಡೆಯಲು ಹಣಕಾಸು ಅಧಿಕಾರಿ ಪೆÇ್ರ. ಕಿರಣ ಮಾಕಾ ಅವರ ಅವಿರತ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ವಿವಿಯ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಈ ಹೊಸ ಕೋರ್ಸ್ ಅನುಮೋದನೆ ಪಡೆದ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಅಭಿನಂದಿಸಿದರು.