
ಕಲಬುರಗಿ;ಮಾ.16: ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದಲ್ಲಿ ವ್ಯಾಪಾರ ಅಧ್ಯಯನ ನಿಕಾಯದ ವತಿಯಿಂದ ಬುಧವಾರದಂದು ‘ನಿಷ್ಠಿ ಐಷರ್’ ಸಹಯೋಗದಲ್ಲಿ “ಸುರಕ್ಷತೆ ಮತ್ತು ರಕ್ಷಣಾತ್ಮಕ ಚಾಲನೆ ಹಾಗೂ ಮೋಟಾರು ವಾಹನ ನಿಯಮಗಳು” ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಐಷರ್ ಮೋಟಾರ್ಸ್ ಲಿಮಿಟೆಡ್‍ನ ಕಾಪೆರ್Çರೇಟ್ ಟ್ರೈನರ್, ಶ್ರೀ.ಸತೀಶ್ ಹೆಚ್.ಎಂ. ಬೆಂಗಳೂರು ಇವರು ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಅವರು ಸುರಕ್ಷತೆ ಮತ್ತು ರಕ್ಷಣಾತ್ಮಕ ಚಾಲನೆಯ ಸೂಕ್ಷ್ಮ ಅಂಶಗಳನ್ನು ವಿವರಿಸಿದರು ಮತ್ತು ಮೋಟಾರು ವಾಹನ ನಿಯಮಾವಳಿಗಳ ನಿಬಂಧನೆಗಳನ್ನು ವಿವರವಾಗಿ ವಿವರಿಸಿದರು. ಶ್ರೀ ದೊಡ್ಡಪ್ಪ ನಿಷ್ಠಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವ್ಯವಹಾರ ಅಧ್ಯಯನ ನಿಕಾಯದ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.
ವಿಚಾರ ಸಂಕಿರಣದಲ್ಲಿ ವ್ಯಾಪಾರ ಅಧ್ಯಯನ ನಿಕಾಯದ ಅಧ್ಯಾಪಕರಾದ ಶ್ರೀಮತಿ ರೇಣುಕಾ ಚವ್ಹಾಣ, ಶ್ರೀಮತಿ ರಾಜೇಶ್ವರಿ ಸಾಲಿ, ಶ್ರೀಮತಿ ರೂಪಾ, ಮಹಾಂತೇಶ ಹೂಗಾರ, ಮತ್ತು ಆಕಾಶ ಮೂಲಗೆ ಸೇರಿದಂತೆ ವ್ಯವಹಾರ ಅಧ್ಯಯನ ನಿಕಾಯದ ಡೀನ್ ಡಾ ಎಸ್ ಎಚ್ ಹೊನ್ನಳ್ಳಿ ಅವರು ಉಪಸ್ಥಿತರಿದ್ದರು.