ಶರಣಬಸವ ವಿವಿಯಲ್ಲಿ ರೈತ ದಿನಾಚರಣೆ

ಕಲಬುರಗಿ:ಡಿ.24: ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಕಾಯದ ವತಿಯಿಂದ “ರೈತನ ಕೆಲಸ ಗಂಟೆಗಳ ಲೆಕ್ಕದಲ್ಲಿ ಅಲ್ಲ, ಎಕರೆಗಳ ಲೆಕ್ಕದಲ್ಲಿ” ಎಂಬ ಶೀರ್ಷಿಕೆಯೊಂದಿಗೆ ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿ ಶನಿವಾರದಂದು ಏರ್ಪಡಿಸಲಾದ “ರಾಷ್ಟ್ರೀಯ ರೈತ ದಿನಾಚರಣೆ”ಯನ್ನು ಕೊಪ್ಪಳದ ಅಯೋಧ್ಯ ಕ್ರಾಪ್ಸ್ ಅಕಾಡೆಮಿಯ ಸಂಸ್ಥಾಪಕರಾದ ಡಾ. ಎಂ.ಬಿ. ಪಾಟೀಲ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನಿಲಕುಮಾರ ಬಿಡವೆ, ಡೀನ್ ಡಾ. ¯ಕ್ಷ್ಮಿ ಪಾಟೀಲ್ ಮಾಕಾ, ವ್ಯವಹಾರ ಅಧ್ಯಯನ ನಿಕಾಯದ ಡೀನ್ ಡಾ. ಎಸ್.ಎಚ್. ಹೊನ್ನಳ್ಳಿ ಸೇರಿದಂತೆ ಇತರ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.