ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪರಿಸರ ದಿನಾಚರಣೆ

ಕಲಬುರಗಿ :ಜೂ.6: ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದವತಿಯಿಂದ ವಿಶ್ವಪರಿಸರ ದಿನಾಚರಣೆ ಆಚರಿಸಲಾಯಿತು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಇಂದಿರಾ ಶೇಟಕಾರ ಮಾತನಾಡಿ, ಪರಿಸರ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ನಮಗೆ ಆಮ್ಲಜನಕ ಒದಗಿಸುವ ಗಿಡಮರಗಳು ನಮ್ಮ ಪ್ರಾಣಜೀವಾಳವಾಗಿÀ್ಢ. ಈ ಕರೋನಾ ಸಮಯದಲ್ಲಿ ಆಮ್ಲಜನಕದ ಅವಶ್ಯಕತೆ ಎಷ್ಟು ಎನ್ನುವುದು ಎಲ್ಲರಿಗೂ ಗೊತ್ತಾಗಿರುವುದು. ಅದಕ್ಕಾಗಿ ಎಲ್ಲರೂ ತಮ್ಮ ತಮ್ಮಮನೆಗಳಲ್ಲಿ ಸಸಿಗಳನ್ನು ನೆಡುವುದು ಅವಶ್ಯಕವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ನ್ಯಾಕ್ ಸಂಯೋಜಕ ಡಾ.ದಶರಥ ಮೇತ್ರೆ, ಪೆÇ್ರ.ಸುನಂದಾ ವಾಂಜರಖೇಡೆ, ಪೆÇ್ರ.ಸೀನಾ ನಾಯಕ, ಪೆÇ್ರ.ಮಹೇಶ ನೀಲೆಗಾರ, ಪೆÇ್ರ.ನಯನಾ ಶಹಾ, ಗ್ರಂಥಪಾಲಕ ವಿರೇಶ ಹಿರೇಮಠ, ರಾ.ಸೇ, ಯೋ.ಅಧಿಕಾರಿ ಪೆÇ್ರ.ದಯಾನಂದ ಹೊಡಲ್ ಹಾಗೋ ಸ್ವಯಂ ಸೇವಕರು ಪಾಲ್ಗೊಂಡಿದ್ದರು.