ಶರಣಬಸವೇಶ್ವರ ಮೂರ್ತಿಗೆ ಗೌರವ ಸಮರ್ಪಣೆ

ಬೀದರ್: ಮಾ.31:ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ದಾಸೋಹ ಮನೆಯಲ್ಲಿ ಕಲಬುರ್ಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ 202ನೇ ಜಾತ್ರಾ ಮಹೋತ್ಸವ ಅಂಗವಾಗಿ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಶ್ರೀ ಶರಣಬಸವೇಶ್ವರರ ಮೂರ್ತಿಗೆ ಗೌರವ ಸಮರ್ಪಿಸಿದರು.
ಬೀದರ್ ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಕಮಲಾಬಾಯಿ ಕಂಬಳಿಮಠ, ಹೇಮಲತಾ ಮಲ್ಲಿನಾಥ, ಅಲ್ಲಮಪ್ರಭು ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.