ಶರಣಬಸವೇಶ್ವರ ಪುಣ್ಯಕ್ಷೇತ್ರದಲ್ಲಿ 40 ದಿನಗಳ ವಿಶೇಷ ಸಾಮಾಜಿಕ-ಧಾರ್ಮಿಕ ಪ್ರವಚನಗಳ ಕಾರ್ಯಕ್ರಮ ಸಾರಂಗಧರ ಶ್ರೀಗಳಿಂದ ಉದ್ಘಾಟನೆ

ಕಲಬುರಗಿ;ಜು. 29: ಅಖಿಲ ಭಾರತ ಶಿವಾನುಭವ ಮಂಟಪ, ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಫ್ಯಾಮಿಲಿ ಟ್ರಸ್ಟ್ ಮತ್ತು ಶರಣಬಸವೇಶ್ವರ ಸಂಸ್ಥಾನ ಜಂಟಿಯಾಗಿ, 18ನೇ ಶತÀಮಾನದ ಶ್ರೀ ಶರಣಬಸವೇಶ್ವರರ ಪುಣ್ಯತಿಥಿ ಸ್ಮರಣಾರ್ಥ, ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಪುಣ್ಯಕ್ಷೇತ್ರದ ಆವರಣದಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿಯವರ ಪೀಠದ 40ನೇ ವಾರ್ಷಿಕೋತ್ಸವ ಮತ್ತು ಪವಿತ್ರ ಶ್ರಾವಣ ಮಾಸದಂಗವಾಗಿ ಜುಲೈ 28 ರಿಂದ ಸೆಪ್ಟೆಂಬರ್ 05 ರವರೆಗೆ 40 ದಿನಗಳ ಕಾಲ ವಿಶೇಷ ಸಾಮಾಜಿಕ-ಧಾರ್ಮಿಕ ಪ್ರವಚನಗಳ ಕಾರ್ಯಕ್ರಮವನ್ನು ಶ್ರೀಶೈಲಂ ಸಾರಂಗ ಮಠದ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಗುರುವಾರ ಸಾಯಂಕಾಲ ಉದ್ಘಾಟಿಸಿದರು.

ಅರ್ಚನ, ಅರ್ಪಣ, ಅನುಭಾವ, ಶ್ರವಣ ಮತ್ತು ಮನನ ಇದು ಶರಣರ ಸಾಂಸ್ಕøತಿಕ ದಾಸೋಹ ಪರಂಪರೆ. ಮನುಷ್ಯ ಸುಖ, ಶಾಂತಿ ಮತ್ತು ನೆಮ್ಮದಿ ದೊರೆಯಬೇಕೆಂದರೆ ಮಹಾತ್ಮರ ಸತ್ಪುರುಷರ, ಶರಣರ, ಸಂತರ, ಅನುಭಾವಿಗಳ ಸನ್ನಿಧಿಯಲ್ಲಿರಬೇಕು. ಇದರಿಂದ ನಮ್ಮ ಜೀವನ ಪಾವನಗೊಳ್ಳುವುದು. 40 ದಿನಗಳ ಈ ವಿಶೇಷ ಪ್ರವಚನ ಕಾರ್ಯಕ್ರಮಗಳನ್ನು 40 ವಿವಿಧ ವಿದ್ವಾಂಸರು ನೀಡುತ್ತಿರುವುದು ಕರ್ನಾಟಕ ರಾಜ್ಯದಲ್ಲಿಯೆ ಮೊದಲು ಎಂದು ಸಾರಂಗಧರ ಶ್ರೀಗಳು ತಮ್ಮ ಆರ್ಶೀವಚನ ನೀಡಿದರು.

ಬಸವಣ್ಣನವರ ಜೊತೆ ನೀಲಾಂಬಿಕೆಯಂತೆ, ರಾಮಕೃಷ್ಣ ಪರಮಹಂಸರ ಜೊತೆ ಶಾರದಾ ಮಾತೆಯಂತೆ, ಶರಣಬಸವೇಶ್ವರರ ಜೊತೆ ಮಹಾದೇವಿ ತಾಯಿಯಂತೆ ಇಂದು ನಮ್ಮ ನಿಮ್ಮೆಲ್ಲರ ನಡುವೆ ಶರಣಬಸವಪ್ಪ ಅಪ್ಪಾಜಿಯವರ ಜೊತೆ ದಾಕ್ಷಾಯಿಣಿ ತಾಯಿಯವರು ಇದ್ದಾರೆ ಎಂದು ಹೇಳಿದರು. ದಾಕ್ಷಾಯಿಣಿ ತಾಯಿಯವರು ಹಾದಾಡುವ ಹೊಸ್ತಿಲಲ್ಲಿ ಹೊಯ್ದಾಡುವ ದೀಪವಾಗಿದ್ದಾರೆ ಎಂದು ಬಣ್ಣಿಸಿದರು.

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಮತ್ತು ಅವರ ಸಹೋದರಿಯರಾದ ಕುಮಾರಿ ಶಿವಾನಿ ಎಸ್ ಅಪ್ಪಾ, ಕುಮಾರಿ ಭವಾನಿ ಎಸ್ ಅಪ್ಪಾ ಮತ್ತು ಕುಮಾರಿ ಮಹೇಶ್ವರಿ ಎಸ್ ಅಪ್ಪಾ ಅವರಿಂದ ಭಕ್ತಿಗೀತೆಗಳ ಗಾಯನ ನಡೆಯಿತು.

ಕಾರ್ಯಕ್ರಮದಲ್ಲಿ ಚೌಡಾಪುರಿ ಹಿರೇಮಠದ ಪೂಜ್ಯ ಡಾ.ರಾಜಶೇಖರ ಶಿವಾಚಾರ್ಯರು ತಮ್ಮ ಆಶೀರ್ವಚನವನ್ನು ನೀಡಿದರು. ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ ವಿ ನಿಷ್ಠಿ ತಮ್ಮ ಉಪನ್ಯಾಸಮಾಲಿಕೆ ಶರಣಬಸವೇಶ್ವರರ ಸಂಸ್ಕøತಿ ಮತ್ತು ಪವಾಡಗಳನ್ನು ವಿವರಿಸಿದರು.

ಈ ಕಾರ್ಯಕ್ರಮವು ಶ್ರೀ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರ ಸನ್ನಿಧಿಯಲ್ಲಿ ಜರುಗಿತು. ಇದೇ ಸಂಧರ್ಭದಲ್ಲಿ ಡಾ. ಶಿವರಾಜ ಶಾಸ್ತ್ರಿ ಹೇರೂರು ಬರೆದ ದಾಸೋಹ ಪರಿಣಾಮಿ ಎಂಬ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಹಾಗೂ ಡಾ. ಉಮಾ ದೇಶಮುಖ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಡಾ. ನೀಲಾಂಬಿಕಾ ಶೇರಿಕಾರ, ಪ್ರೊ. ವಾಣಿಶ್ರೀ ಸಿ ಟಿ ಹಾಜರಿದ್ದರು.