ಶರಣಬಸವೇಶ್ವರ ಪುಣ್ಯಕ್ಷೇತ್ರದಲ್ಲಿ 40 ದಿನಗಳ ವಿಶೇಷ ಸಾಮಾಜಿಕ-ಧಾರ್ಮಿಕ ಪ್ರವಚನ

ಕಲಬುರಗಿ;ಜು.26 ಅಖಿಲ ಭಾರತ ಶಿವಾನುಭವ ಮಂಟಪ, ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಫ್ಯಾಮಿಲಿ ಟ್ರಸ್ಟ್ ಮತ್ತು ಶರಣಬಸವೇಶ್ವರ ಸಂಸ್ಥಾನ ಜಂಟಿಯಾಗಿ, 18ನೇ ಶತÀಮಾನದ ಶ್ರೀ ಶರಣಬಸವೇಶ್ವರರ ಪುಣ್ಯತಿಥಿ ಸ್ಮರಣಾರ್ಥ, ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಪುಣ್ಯಕ್ಷೇತ್ರದ ಆವರಣದಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿಯವರ ಪೀಠದ 40ನೇ ವಾರ್ಷಿಕೋತ್ಸವ ಮತ್ತು ಪವಿತ್ರ ಶ್ರಾವಣ ಮಾಸದಂಗವಾಗಿ ಜುಲೈ 28 ರಿಂದ ಸೆಪ್ಟೆಂಬರ್ 05 ರವರೆಗೆ 40 ದಿನಗಳ ಕಾಲ ವಿಶೇಷ ಸಾಮಾಜಿಕ-ಧಾರ್ಮಿಕ ಪ್ರವಚನಗಳನ್ನು ಆಯೋಜಿಸುತ್ತಿದೆ.

ಕಲಬುರಗಿ ನಗರದ ದಾಸೋಹ ಮಹಾಮನೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಉದ್ಘಾಟನಾ ದಿನದಿಂದ ಸಂಸ್ಥಾನದ 7ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರ ಪುಣ್ಯತಿಥಿ ಸ್ಮರಣಾರ್ಥ ಎಂಟು ದಿನಗಳ ಕಾಲ ವಿಶೇಷ ಪ್ರವಚನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಮಾತೋಶ್ರೀ ಡಾ. ಅವ್ವಾಜಿ ಮಾತನಾಡಿ, ಶ್ರೀ ಶಿವಲಿಂಗ ಶಾಸ್ತ್ರಿ ಗರೂರು ಅವರಿಂದ ಒಂದು ತಿಂಗಳ ಕಾಲ ಶರಣಬಸವೇಶ್ವರ ದೇವರ ಪುರಾಣ ಪ್ರವಚನ ಜುಲೈ 28 ರಿಂದ ಆಗಸ್ಟ್ 27 ರವರೆಗೆ ನಡೆಯಲಿದ್ದು, ಶ್ರೀ ಬ್ರಹ್ಮಚಾರಿ ಮಹೇಶ ಗುರೂಜಿ ಅವರಿಂದ ಕಾರ್ಯಕ್ರಮ ನಡೆಯಲಿದೆ. ಶ್ರಾವಣ ಮಾಸದ ಆರಂಭದ ಈ ಎಲ್ಲಾ ವಿಶೇಷ ಕಾರ್ಯಕ್ರಮಗಳನ್ನು ಸಾರಂಗ ಮಠದ ಮತ್ತು ಸುಲಫುಲ ಮಠದ ಜಗದ್ಗುರು ಡಾ.ಸಾರಂಗಧÀರ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಲಿದ್ದು, ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಚೌಡಾಪುರಿ ಹಿರೇಮಠದ ಪೂಜ್ಯ ಡಾ.ರಾಜಶೇಖರ ಶಿವಾಚಾರ್ಯರು ಆಗಮಿಸಲಿದ್ದಾರೆ. ಪೂಜ್ಯ ಡಾ.ಅಪ್ಪಾಜಿ, ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಹಾಗೂ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಇವರ ಸಾನಿಧ್ಯದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಮಾತೋಶ್ರೀ ಡಾ.ಅವ್ವಾಜಿ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಪ್ರತಿದಿನ ಸಂಜೆ 5.30ರಿಂದ 6.30ರವರೆಗೆ ಒಂದು ಗಂಟೆ ಕಾಲ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡು ನಂತರ ಸಾಮಾಜಿಕ-ಧಾರ್ಮಿಕ ಪ್ರವಚನ ನಡೆಯಲಿದೆ ಎಂದರು. ಈ ವರ್ಷದ ಶ್ರಾವಣ ಮಾಸದ ಕಾರ್ಯಕ್ರಮದ ವೈಶಿಷ್ಟ್ಯವೆಂದರೆ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಮತ್ತು ಅವರ ಸಹೋದರಿಯರಾದ ಕುಮಾರಿ ಶಿವಾನಿ ಎಸ್ ಅಪ್ಪಾ, ಕುಮಾರಿ ಭವಾನಿ ಎಸ್ ಅಪ್ಪಾ ಮತ್ತು ಕುಮಾರಿ ಮಹೇಶ್ವರಿ ಎಸ್ ಅಪ್ಪಾ ಅವರಿಂದ ಭಕ್ತಿಗೀತೆಗಳ ಗಾಯನ ನಡೆಯಲಿದೆ ಎಂದರು.

ಶರಣಬಸವೇಶ್ವರರ ಪವಿತ್ರ ಕಾರ್ಯಗಳು ಮತ್ತು ಪವಾಡಗಳ ಕುರಿತು ಸಾಮಾಜಿಕ ಧಾರ್ಮಿಕ ಪ್ರವಚನಗಳು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ ನಿಷ್ಠಿ ಅವರ ಮೊದಲ ದಿನದ ಪ್ರವಚನದೊಂದಿಗೆ ಪ್ರಾರಂಭವಾಗಲಿವೆ. ಮತ್ತು ಎರಡನೇ ದಿನÀ ಪೂಜ್ಯ ಡಾ.ಅಪ್ಪಾಜಿ ಅವರ ಪುತ್ರಿಯರಾದ ಕುಮಾರಿ ಶಿವಾನಿ ಮತ್ತು ಕುಮಾರಿ ಭವಾನಿಯವರ ಜೊತೆಯೊಂದಿಗೆ ಪೆÇ್ರ.ಶಿವರಾಜ್ ಶಾಸ್ತ್ರಿ ಹೇರೂರು ಅವರು ವಿಷಯದ ಕುರಿತು ವಿಶೇಷ ಪ್ರವಚನ ನೀಡಲಿದ್ದಾರೆ ಎಂದು ಹೇಳಿದರು.

ಸೆಪ್ಟೆಂಬರ್ 05 ರವರೆಗೆ ವಿವಿಧ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ನುರಿತ ಬುದ್ಧಿಜೀವಿಗಳು ಮತ್ತು ಶಿಕ್ಷಣತಜ್ಞರಿಂದ ವಿಶೇಷ ಉಪನ್ಯಾಸಗಳು ಮತ್ತು ಪ್ರವಚನಗಳು ನಡೆಯಲಿದ್ದು, 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರಿಂದ ಶ್ರಾವಣ ಮಾಸದ ವಿಶೇಷ ಪಾದಪೂಜೆ, ಪ್ರತಿದಿನ ಚಿ.ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರಿಂದ ಮಹಾ ಪಲ್ಲಕ್ಕಿ ಉತ್ಸವ ನಡೆಯಲಿದೆ. ಶ್ರಾವಣ ಮಾಸದ ಎರಡನೇ ಮತ್ತು ನಾಲ್ಕನೇ ಸೋಮವಾರದಂದು ದೂರದೂರುಗಳಿಂದ ಆಗಮಿಸುವ ಭಕ್ತರಿಂದ ವಿಶೇಷ ಭಜನೆ ನಡೆಯಲಿದೆ. ಮತ್ತು ಎಲ್ಲಾ 40 ದಿನಗಳಲ್ಲಿ ದೇವಸ್ಥಾನದ ಸಂಕೀರ್ಣದಲ್ಲಿ ಬೆಳಿಗ್ಗೆ 6.30 ರಿಂದ 7.30 ರವರೆಗೆ ವಿಶೇಷ ಯೋಗ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರು ಎಲ್ಲಾ ಪತ್ರಿಕಾ ಭಾಂಧವರನ್ನು ಸ್ವಾಗತಿಸಿದರು. ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಶಿವರಾಜ ಶಾಸ್ತ್ರಿ ಹೇರೂರ, ಡಾ. ನೀಲಾಂಬಿಕಾ ಪಾಟೀಲ ಶೇರಿಕಾರ, ಪ್ರೊ. ವಾಣಿಶ್ರೀ ಸಿ ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.