ಶರಣಬಸವೇಶ್ವರ ಜಾತ್ರೆಯಲ್ಲಿ ತೊಟ್ಟಿಲು ಮುರಿದು ಇಬ್ಬರಿಗೆ ಗಾಯ

ಕಲಬುರಗಿ,ಏ.10-ಇಲ್ಲಿನ ಶರಣಬಸವೇಶ್ವರ ಜಾತ್ರೆಯಲ್ಲಿ ತೊಟ್ಟಿಲು ಮುರಿದು ಇಬ್ಬರಿಗೆ ಗಾಯಗಳಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ರಾಘವೇಂದ್ರ ಕಾಲೋನಿಯ ಭವಾನಿ ಗಂಡ ಬಸವರಾಜ (35) ಮತ್ತು ನ್ಯೂ ರಾಘವೇಂದ್ರ ಕಾಲೋನಿಯ ಸಾಯಿನಾಥ ತಂದೆ ಮಲ್ಲಿಕಾರ್ಜುನ (13) ಎಂಬುವವರಿಗೆ ಗಾಯಗಳಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಾತ್ರೆ ಅಂಗವಾಗಿ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಹಾಕಲಾಗಿರುವ ರೌಂಡ್ ತಿರುಗುವ ತೊಟ್ಟಿಲಲ್ಲಿ ಭವಾನಿ, ಸಾಯಿನಾಥ ಸೇರಿದಂತೆ ಮತ್ತಿತರರು ಕುಳಿತುಕೊಂಡಿದ್ದರು. ತೊಟ್ಟಿಲು ತಿರುಗುತ್ತಿದ್ದ ವೇಳೆಯೇ ತೊಟ್ಟಿಲಿಗೆ ಅಳವಡಿಸಲಾಗಿದ್ದ ನಟ್ ಕಳಚಿ ತೊಟ್ಟಿಲು ಮುರಿದು ಬಿದ್ದು ಭವಾನಿ ಅವರ ಕಾಲಿಗೆ ಮತ್ತು ಸಾಯಿನಾಥ ತಲೆಗೆ ಪೆಟ್ಟಾಗಿದೆ. ತಕ್ಷಣವೇ ಅಲ್ಲಿದ್ದವರು ತೊಟ್ಟಿಲು ತಿರುಗುವುದನ್ನು ನಿಲ್ಲಿಸಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ತೊಟ್ಟಿಲಲ್ಲಿ ಕುಳಿತಿದ್ದ ಇನ್ನುಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.