ಶರಣಬಸವೇಶ್ವರರು ದೇವರ ದೇವರು

ಕಲಬುರಗಿ:ಆ.6:ಮಹಾದಾಸೋಹಿ ಶರಣಬಸವೇಶ್ವರರು ದೇವರ ದೇವರು ಎಂದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎಂ.ಹಿರೇಮಠ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ಸಂಸ್ಥಾನ ಶ್ರಾವಣ ಮಾಸದ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ಶರಣಬಸವೇಶ್ವರರ ಶೀವಲೀಲೆಗಳು ವಿಷಯದ ಮೇಲೆ ಉಪನ್ಯಾಸ ನೀಡಿದರು.
ತಮ್ಮ ಎಲ್ಲಾ ಸಾಧನೆಗಳಿಗೆ ಶರಣಬಸವರೇ ಕಾರಣ. ದಾಸೋಹ ಮನೆಯಲ್ಲಿದ್ದೇ ಅಭ್ಯಾಸ ಮಾಡಿ, ಪ್ರಾಧ್ಯಾಪಕನಾಗಿ 325 ಪುಸ್ತಕಗಳನ್ನು ಬರೆಯಲು ಶರಣರ ಪ್ರೇರಣೆ ಇದೆ. ಶರಣಬಸವೇಶ್ವರ ಕರುಣೆಯ ಕಂದನಾಗಿ ನಾನು ಬೆಳೆದಿರುವೆ.ಒಂದು ಸಲ ಮನೆಗೆ ಕಳ್ಳರು ಬಂದು ಎಲ್ಲವನ್ನೂ ದೋಚಿಕೊಂಡು ಹೋದರು ಆದರೆ, ನಮಗೇನು ಮಾಡಲಿಲ್ಲ ಇದಕ್ಕೆ ಶರಣರ ಕೃಪೆಯೇ ಕಾರಣ. ತಮ್ಮ ತಂದೆ ಮತ್ತು ಅಜ್ಜ ಶರಣಬಸವೇಶ್ವರ ಪುರಾಣ ಹೇಳುತ್ತಿದ್ದರು.ಅಜ್ಜನಿಗೆ ಪುರಾಣ ಓದಿ ಓದಿ ಕಣ್ಣು ಕಾಣಿಸದಂತಾಯಿತು. ಶರಣರಲ್ಲಿ ಬೇಡಿಕೊಂಡಾಗ ಕಣ್ಣುಗಳು ಮತ್ತೆ ಕಾಣಿಸುವಂತಾಗಿವೆ. ಬಡ ಜಂಗಮನಾದ ನನಗೆ ವಿಶ್ವವಿದ್ಯಾಲಯ ಪೆÇ್ರಫೇಸರ್ ಆಗಿದ್ದು ಶರಣರ ಆಶೀರ್ವಾದಿಂದ ಎಂದು ಹೇಳಿದರು.