ಶರಣಬಸವರು ಭರವಸೆಯ ಸಂಜೀವಿನಿ

ಕಲಬುರಗಿ:ಜು.30:ಮಹಾದಾಸೋಹಿ ಶರಣಬಸವರು ಎಲ್ಲ ಜೀವನದಲ್ಲಿ ಭರವಸೆಯ ಸಂಜೀವಿನಿಯಾಗಿದ್ದಾರೆ ಕಂಗೋಳಿಸುತ್ತಿದ್ದಾರೆ ಎಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಶಿವರಾಜ ಶಾಸ್ತ್ರೀ ಹೇರೂರು ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ಉಪನ್ಯಾಸ ನೀಡಿದರು.

ಶರಣಬಸವರು ತಮ್ಮ ಜೀವನದಲ್ಲಿ ತೋರಿದ ಘಟನೆಗಳನ್ನು ಹೇಳುತ್ತಾ ಬಾಲ್ಯದಲ್ಲಿ ನದಿಯಲ್ಲಿ ಮುಳುಗುವ ಪರಿಸ್ಥಿತಿ ಬಂದಾಗ ಅವರನ್ನು ಶರಣಬಸವರು ಕಾಪಾಡಿದ್ದು, ಒಂದು ಸಲ ಜೋರಾಗಿ ಬಿದ್ದು ಇನ್ನೇನು ತಲೆ ಒಡೆದು ಹೋಯಿತು ಎನ್ನುವ ಸ್ಥಿತಿ ಇದ್ದಾಗ ಶರಣಬಸವರು ತಲೆಗೆ ಕೈಕೊಟ್ಟು ಹಿಡಿದು ಕಾಪಾಡಿದ್ದು ಹೀಗೆ ತಮ್ಮ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಹಂಚಿಕೊಂಡರು.