ಶರಣಬಸಪ್ಪ ಕೋಡ್ಲಾ ಅವರ ಅಮೋಘ ಸೇವೆಗೆ ಚಿನ್ನದ ಪದಕ : ಮೇಘಣ್ಣನವರ್

(ಸಂಜೆವಾಣಿ ವಾರ್ತೆ)
ಹುಮನಾಬಾದ :ಆ.8:ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದ ಶರಣಬಸಪ್ಪ ಕೊಡ್ಲಾ ಹುಮನಾಬಾದ್ ಪೆÇಲೀಸ್ ವೃತ್ತದಲ್ಲಿ ಜನಸ್ನೇಯಾಗಿ ಸೇವೆಸಲ್ಲಿಸಿದ್ದು ಹೆಮ್ಮೆಯ ಸಂಗತಿ ಎಂದು ಬೀದರ್ ಜಿಲ್ಲಾ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್ ಪೆÇಲೀಸ್ ಇಲಾಖೆ ಸಿಬ್ಬಂದಿ ವರ್ಗ ಹಮ್ಮಿಕೊಂಡಿದ್ದ ಬೀಳ್ಕೋಡುಗೆ ಸಮಾರಂಭದಲ್ಲಿ ಮಾತನಾಡುತ್ತಾ ತಿಳಿಸಿದರು.
ಕೊಲೆ ದರೋಡೆ ಸೋಲಿಗೆ ಪ್ರಕರಣಗಳನ್ನು ಇವರ ನೇತೃತ್ವದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಪಟ್ಟಣದಲ್ಲಿ ಹಾಡು ಹೋಗಲೇ ಇಂಜಿನಿಯರಿ ಮನೆಗೆ ಸುಲಿಗಾರರು ನುಗ್ಗಿ ಬೆದರಿಸಿ ಒಡವೆಗಳನ್ನು ತೆಗೆದುಕೊಂಡು ಹೋದ ಘಟನೆಯನ್ನು ಚಾಲೆಂಜ್ ಆಗಿ ಸ್ವಿಕರಿಸಿ ಅಪರಾಧಿಗಳನ್ನು ಪತ್ತೆ ಹಚ್ಚಿದ ಶ್ರೇಯಸ್ಸು ಚನ್ನಬಸವ ಕೊಡ್ಲಾವರಿಗೆ ಸಲ್ಲುತ್ತದೆ. ಇವರ ಅತ್ಯುತ್ತಮ ಸೇವೆಗೆ ಪೆÇೀಲಿಸ್ ಇಲಾಖೆ ಗುರುತಿಸಿ ಮುಖ್ಯಮಂತ್ರಿ ಚಿನ್ನದ ಪದಕ ಕೂಡ ಘೋಷಣೆ ಮಾಡಲಾಗಿದೆ. ಶಿಘ್ರದಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಮೇಘಣನವರು ತಿಳಿಸಿದರು.
ಹುಮನಾಬಾದ್ ಪೆÇಲೀಸ್ ಉಪ ವಿಭಾಗದ ಎ.ಎಸ್.ಪಿ ಶಿವಾಂಶು ರಜಪೂತ ಮಾತನಾಡಿ ವಿಧಾನಸಭಾ ಚುನಾವಣೆ ಸೇರಿದಂತೆ ದೇಶದ ಪ್ರಧಾನಮಂತ್ರಿಯವರ ಬಹಿರಂಗ ಸಭೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬಂದು ಯಶಸ್ವಿ ಬಂದೋಬಸ್ ಮಾಡಿದ್ದಕ್ಕೆ ಶ್ಲಾಘಿಸಿದರು ಎಂದು ಹೇಳಿದರು.
ಪರಿಸರವಾದಿ ಹಾಗೂ ಪತ್ರಕರ್ತರು ಶೈಲೇಂದ್ರ ಕವಾಡಿ
ಮಾತನಾಡಿದರು.
ಸುರೇಶ ಘಾಂಗ್ರೆ, ಗ್ರಾಮ ಪಂಚಾಯತ್ ಅಧ್ಯಕ್ಷ ವೀರಪ್ಪ ದುಮ್ಮನಸೂರು, ಗುಂಡು ರಡ್ಡಿ, ವಾಜರಿ ಮಾತನಾಡಿದರು.
ಪಿ.ಎಸ್.ಐ ಸುರೇಶ್ ಹಜ್ಜರಗಿ, ಪಿ.ಎಸ್.ಐ ತಮ್ಮಯ್ಯ ಸಂಚಾರಿ ಪಿ.ಎಸ್.ಐ ಬಸಲಿಂಗಪ್ಪ ಹಳ್ಳಿಖೇಡ(ಬಿ) ಪಿ.ಎಸ್.ಐ ಅಯ್ಯಪ್ಪ ಚಿಟಗುಪ್ಪ ಸಿಪಿಐ ವಿಜಯಕುಮಾರ, ಮಹೇಶ ಗೌಡ ಪಾಟೀಲ ಉಪಸ್ಥಿತರಿದ್ದರು ಐ.ಎಸ್ ಶಕೀಲ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.