ಶರಣಪ್ರಕಾಶ್ ಚುನಾವಣಾ ವೆಚ್ಚ 50 ಕೋಟಿ:ತೇಲ್ಕೂರ್ ಆರೋಪ

ಕಲಬುರಗಿ,ಮೇ 11: ಸೇಡಂ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಡಾ.ಶರಣಾಪ್ರಕಾಶ್‍ಪಾಟೀಲ್ ಅವರು ನಿನ್ನೆ ಮುಕ್ತಾಯಗೊಂಡ ಚುನಾವಣೆಯಲ್ಲಿ ರೂ. 50 ಕೋಟಿಖರ್ಚು ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ತೆಲ್ಕೂರ್ ಗಂಭೀರ
ಆರೋಪ ಮಾಡಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,
ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಶರಣಾಪ್ರಕಾಶ್ ಪಾಟೀಲ್ ನೀರಿನಂತೆ ಹಣಖರ್ಚು ಮಾಡಿದ್ದಾರೆ. ಈ ಕುರಿತು ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರುಮೊಬೈಲ್‍ಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಮಾತು ಮಾತಿಗೆ ಶರಣಪ್ರಕಾಶ್ ಒಬ್ಬ ಪ್ರಾಮಾಣಿಕ ರಾಜಕಾರಣಿ ಎಂದು
ಬಿಂಬಿಸಲಾಗುತ್ತದೆ. ಹಾಗಾದರೆ, ಅವರು ನಿಜಕ್ಕೂ ಪ್ರಾಮಾಣಿಕರೇ ಆಗಿದ್ದರೆ
ಚುನಾವಣೆಯಲ್ಲಿ ಖರ್ಚು ಮಾಡಲು ಶರಣಪ್ರಕಾಶ್ ಅವರ ಬಳಿ ಇಷ್ಟೊಂದು ಹಣಎಲ್ಲಿಂದ ಬಂತು ಎಂಬುದು ತಿಳಿಯದಾಗಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಹಾಗೂ ಆಪಕ್ಷಕ್ಕೆ ನಿಷ್ಠಾವಂತರು ಎಂದು ಹೇಳಿಕೊಳ್ಳುವ ಕಾರ್ಯಕರ್ತರು ಉತ್ತರನೀಡಬೇಕೆಂದು ಶಾಸಕ ತೇಲ್ಕೂರ್ ಸವಾಲು ಹಾಕಿದರು.ಈ ಹಿಂದೆ ಶರಣಪ್ರಕಾಶ್ ಅವರು ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾಗಿದ್ದ ವೇಳೆಮಾಡಿಕೊಂಡ ಅಕ್ರಮ ನೇಮಕಾತಿಗಳ ಕುರಿತು ಸ್ವತಃ ರಾಜ್ಯದ ಹೈಕೋರ್ಟ್‍ಛೀಮಾರಿ ಹಾಕಿದೆ. ಮತ್ತೊಂದೆಡೆ, ಕಲಬುರಗಿಯ ಸಹಾರಾ ಲೇಔಟ್ ಅಕ್ರಮದ ಬಗ್ಗೆತನಿಖೆ ಅರ್ಧಕ್ಕೆ ನಿಂತಿರುವುದು ಏಕೆ? ಎಂದು ತೇಲ್ಕೂರ್ ಪ್ರಶ್ನಿಸಿದರು.ಸಹಾರಾ ಲೇಔಟ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಡೆ ಈವರೆಗೆಅಗತ್ಯ ತನಿಖೆ ಪೂರ್ಣಗೊಂಡಿಲ್ಲ. ಮತ್ತೊಂದೆಡೆ, ಪ್ರಕರಣ ಬಯಲಿಗೆ ಬಂದಬಳಿಕವೂ ಡಾ.ಶರಣಪ್ರಕಾಶ್ ಪಾಟೀಲ್ ತಮ್ಮ ಸ್ನೇಹಿತರೊಬ್ಬರನ್ನು ಲೇಔಟ್‍ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಿದ್ದಾರೆ. ಆ ಸ್ನೇಹಿತ ನೀಡಿರುವ ಕಾರಿನಲ್ಲಿಯೇ
ಡಾ.ಪಾಟೀಲ್ ಓಡಾಡುತ್ತಾರೆ ಎಂದು ತೇಲ್ಕೂರ್ ಟೀಕಿಸಿದರು.
ಚುನಾವಣಾ ಸಂದರ್ಭದಲ್ಲಿ ಈ ಕುರಿತು ತಾವು ಉದ್ದೇಶಪೂರ್ವಕವಾಗಿಯೇ ಯಾವುದೇ ಹೇಳಿಕೆ ನೀಡಿರಲಿಲ್ಲ. ಹಾಗೊಂದುವೇಳೆ ಹೇಳಿಕೆಗಳನ್ನು ನೀಡಿದ್ದರೆಅದೊಂದು ಚುನಾವಣಾ ಗಿಮಿಕ್ ಎನ್ನುವ ಭಾವ ಜನಮಾನಸದಲ್ಲಿ ಮೂಡುವಸಾಧ್ಯತೆಯಿತ್ತು. ಹಾಗಾಗಿ, ಈಗ ಚುನಾವಣೆ ಪೂರ್ಣಗೊಂಡ ಬಳಿಕ ಈ ಕುರಿತುತಾವು ಆರೋಪ ಮಾಡುತ್ತಿದ್ದು, ಅತಿ ಶೀಘ್ರದಲ್ಲಿ ಡಾ.ಪಾಟೀಲರ ಎಲ್ಲಅಕ್ರಮಗಳ ಕುರಿತು ದಾಖಲೆ ಸಮೇತ ಮಾಧ್ಯಮದ ಎದುರು ಬರುವುದಾಗಿಅವರು ಹೇಳಿದರು.


‘ಇನ್ನಾದರೂ ದ್ವಂದ್ವ ನೀತಿ ಬಿಡಿ’
ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಲಿದ್ದು, ಈ ನಿಟ್ಟಿನಲ್ಲಿಯಾವುದೇ ಅನುಮಾನ ಬೇಡ ಎಂದು ಸೇಡಂ ಶಾಸಕ ರಾಜಕುಮಾರ್ ಪಾಟೀಲ್‍ತೇಲ್ಕೂರ್ ವಿಶ್ವಾಸ ವ್ಯಕ್ತಪಡಿಸಿದರು.
ಕೆಲವು ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿದ್ದರೆ, ಒಂದಷ್ಟು
ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಪರ ಕಂಡುಬರುತ್ತಿವೆ. ಕೆಲವು
ಸಮೀಕ್ಷೆಗಳು ಕಾಂಗ್ರೆಸ್ ಪರ ಇರುವುದರಿಂದ ಆ ಪಕ್ಷದ ಯಾವೊಬ್ಬ
ಮುಖಂಡರೂ ಸದ್ಯಕ್ಕೆ ಇವಿಎಂ ಯಂತ್ರಗಳ ಕಾರ್ಯವೈಖರಿ ಕುರಿತು
ಟೀಕಿಸುತ್ತಿಲ್ಲ. ಒಂದುವೇಳೆ, ಚುನಾವಣಾ ಫಲಿತಾಂಶ ಕಾಂಗ್ರೆಸ್
ವಿರುದ್ಧವಾಗಿದ್ದರೆ ಪುನಃ ಇವಿಎಂ ಯಂತ್ರಗಳ ಕುರಿತು ಅಸಮಾಧಾನ
ವ್ಯಕ್ತವಾಗುತ್ತದೆ. ಮೊದಲು ಇಂತಹ ದ್ವಂದ್ವ ನಿಲುವು ಬಿಡಬೇಕೆಂದು ಅವರು
ಕಾಂಗ್ರೆಸ್ ಮುಖಂಡರಿಗೆ ಕಿವಿಮಾತು ಹೇಳಿದರು.