ಶರಣಪ್ಪ ಗೋನಾಳ ಸಾಮಾಜಿಕ ಕಾರ್ಯ ಶ್ಲಾಘನೀಯ- ಬೋಸುರಾಜು

ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ
ರಾಯಚೂರು, ನ.೨೦, ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಶರಣಪ್ಪ ಗೋನಾಳ ಅವರ ಕಾರ್ಯ ಶ್ಲಾಘನೀಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಎಸ್ ಬೋಸರಾಜು ಹೇಳಿದರು.
ಅವರಿಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
೧೩ ವರ್ಷ ತಮ್ಮದೇ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸಾಧಕರಿಗೆ ಸನ್ಮಾನ ಮಾಡುತ್ತಿರುವುದು ಅವರ ಕಾರ್ಯ ಅತ್ಯುತ್ತಮ. ತಮ್ಮದೇ ಸಾಧನೆ ಮೂಲಕ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವುದು ಶ್ಲಾಘನೀಯ.
ನಗರಸಭೆ ಸದಸ್ಯ ಜಯಣ್ಣ ಮಾತನಾಡುತ್ತಾ ಶರಣಪ್ಪ ಗೋನಾಳ ಅವರ ಸಾಮಾಜಿಕ ಕಾರ್ಯ ಶ್ಲಾಘನೀಯ. ತಮ್ಮದೇ ಸಂಗೀತ ಕ್ಷೇತ್ರದಲ್ಲಿ ೧೩ ವರ್ಷ ನಿರಂತರವಾಗಿ ಅವರ ತಂದೆ ತಾಯಿ ಸ್ಮರಣೆಗಾಗಿ ಮಾಡುತ್ತಿರುವ ಈ ಸಾಮಾಜಿಕ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದ ಅವರು ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳು ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಕಳುಹಿಸುತ್ತಿರುವ ಅನೇಕ ಘಟನೆಗಳು ಜರುಗಿವೆ. ಆದರೆ ಶರಣಪ್ಪ ಗೋನಾಳ ಅವರ ಈ ಕಾರ್ಯ ಶ್ಲಾಘನೀಯ ವಾಗಿದೆ. ಇಂದಿನ ಪೀಳಿಗೆಗೆ ನೈತಿಕ ಮೌಲ್ಯ ಅಗತ್ಯವಾಗಿದೆ ಎಂದರು.
ಈ ವೇಳೆ ಕ. ಜಾ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ ಮಾತನಾಡಿ ಪ್ರಸ್ತುತ ದಿನಮನಗಳಲ್ಲಿ ಜಾನಪದ ಕಣ್ಮರೆಯಾಗುತ್ತಿದೆ ಅದನ್ನು ಉಳಿಸುವ ಕಾರ್ಯ ಶರಣಪ್ಪ ಗೋನಾಳ ಮಾಡುತ್ತಿದ್ದಾರೆ ಅವರ ಕಾರ್ಯ ಶ್ಲಾಘನೀಯ. ಅವರ ತಂದೆ ತಾಯಿಗಳ ಸ್ಮರಣೆಗಾಗಿ ಮಾಡುತ್ತಿರುವ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಪ್ರತಿಭಾ ಸುಗಮ ಸಂಗೀತ ಸಂಸ್ಥೆ ಅಧ್ಯಕ್ಷರಾದ ಶರಣಪ್ಪ ಗೋನಾಳ ಅವರು ಪ್ರಾಸ್ತವಿಕ ಮಾತನಾಡಿದರು.
ಕಾರ್ಯಕ್ರಮ ಸಾನಿಧ್ಯವನ್ನು ಇಲಕಲ್ ಚಿತ್ತರಗಿ ಸಂಸ್ಥಾನ ಮಠ ಮ. ನಿ. ಪ್ರ ಗುರು ಮಹಾಂತಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಚಿಕ್ಕಸೂಗೂರು ಚೌಕಿಮಠ ಡಾ. ಸಿದ್ದಲಿಂಗ ಮಹಾಸ್ವಾಮಿಗಳು,
ನಗರಸಭೆ ಲಲಿತಾ ಕಡಗೋಳ್, ಕಡಗೋಳ್ ಆಂಜನೇಯ, ರಂಗಣ್ಣ ಪಾಟೀಲ್ ಅಳ್ಳುಡಿ, ರಾಮನಗೌಡ ಏಗನೂರು ಹಾಗೂ ಕೇಶವರೆಡ್ಡಿ ಸೇರಿದಂತೆ ಉಪಸ್ಥಿತರಿದ್ದರು.