ಶರಣಪ್ಪನಾಯಕ ಬುದ್ದಿನ್ನಿ ಸನ್ಮಾನ

ಸಿರವಾರ.ಅ.೫- ದೇವದುರ್ಗ ತಾಲೂಕಿನ ಜಾಗಿರಿ ಜಾಡಲದಿನ್ನಿ ತಾಲೂಕು ಪಂಚಾಯತಿ ಮಾಜಿ ಸದಸ್ಯರು ಹಾಗೂ ಮುಸ್ಟೂರು ವಿ. ಎಸ್ .ಎಸ್ ಎನ್ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡ ಶರಣಪ್ಪ ನಾಯಕ ಬುದ್ದಿನ್ನಿ ೪೫ನೇ ಹುಟ್ಟು ಹಬ್ಬವನ್ನು ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಬೆಂಬಲಿಗರು, ಅಭಿಮಾನ ಬಳಗ, ಹಿತೈಷಿಗಳು ಶರಣ್ಣಪ್ಪ ನಾಯಕ ಅವರ ಸ್ವಗ್ರಾಮವಾದ ಬುದ್ದಿನ್ನಿಯ ಸ್ವಗೃಹದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿ ಶುಭಾ ಕೋರಲಾಯಿತು. ಈ ಸಂದರ್ಭದಲ್ಲಿ ಮಂಜುನಾಥ ತಾತ ಮರಕಂದಿನ್ನಿ, ಹನುಮಂತರಾಯ ದೊಡ್ಡಮನೆ, ಬಿ.ಹನುಮಂತ್ರಾಯ,ಆರ್.ಯಮನಪ್ಪ, ಪತ್ರಕರ್ತ ಎಂ.ವಿರೂಪಾಕ್ಷಿ, ಅಂಬರೀಶ್, ಚಂದ್ರು ,ವೆಂಕಟೇಶ ಪೂಜಾರಿ ಬುದ್ದಿನ್ನಿ, ಬಸವರಾಜ ಪೂಜಾರಿ, ನಾಗರಾಜ ಮೂಲಿಮನಿ ಸೇರಿದಂತೆ ಇನ್ನಿತರರು ಇದ್ದರು.