ಶರಣನ ದೇಗುಲಕ್ಕೆ ಸಚಿವ ಯೋಗೇಶ್ವರ್ ಭೇಟಿ: ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಡಾ. ಅಪ್ಪಾ ಕೋರಿಕೆ

ಕಲಬುರಗಿ.ಏ.06: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇಷ್ಟು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಮೂಲಕ ಈ ಪ್ರದೇಶದ ಶ್ರೀಮಂತ ಪ್ರವಾಸೋದ್ಯಮ ಸಾಮಥ್ರ್ಯವನ್ನು ಸರ್ಕಾರ ಪ್ರದರ್ಶಿಸಬೇಕೆಂದು ಶ್ರೀ ಶರಣಬಸವೇಶ್ವರ್ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾ ಅವರು ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದರು.
18ನೇ ಶತಮಾನದ ಸಂತಶ್ರೀ ಶರಣಬಸವೇಶ್ವರರ ಕೃತ ಗದ್ದುಗೆಗೆ ನಮಸ್ಕಾರ ಸಲ್ಲಿಸಲು ಮಂಗಳವಾರ ಆಗಮಿಸಿದ್ದ, ಪ್ರವಾಸೋದ್ಯಮ, ಪರಿಸರ ವಿಜ್ಞಾನ ಮತ್ತು ಪರಿಸರ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಜ್ಞಾಪನಾ ಪತ್ರ ಸಲ್ಲಿಸಿದ ಅವರು, ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ್ ಮತ್ತು ಬಳ್ಳಾರಿ ಸೇರಿದಂತೆ ಈ ಪ್ರದೇಶದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರವಾಸೋದ್ಯಮ ಸಾಮಥ್ರ್ಯ ಮತ್ತು ಶ್ರೀಮಂತ ಐತಿಹಾಸಿಕ ಸ್ಮಾರಕಗಳ ನಿಧಿಯಾಗಿದ್ದವು. ಆದಾಗ್ಯೂ, ಸರ್ಕಾರಗಳ ಅಸಕರಾತ್ಮಕ ಮನೋಭಾವದಿಂದಾಗಿ ಈ ಭಾಗದ ಪ್ರವಾಸೋಧ್ಯಮ ಸಾಮರ್ಥ ಬಗ್ಗೆ ಯಾವುದೇ ರೀತಿಯಲ್ಲಿ ಬಳಕೆಯಾಗದೆ ಉಳಿದಿದೆ ಎಂದರು.
18 ನೇ ಶತಮಾನದ ಶ್ರೀ ಶರಣಬಸವೇಶ್ವರರ ದೇಗುಲ ರಾಜ್ಯದ ಇಡೀ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ರಾಜ್ಯ ಮತ್ತು ರಾಷ್ಟ್ರದ ದೂರದ ಪ್ರದೇಶಗಳಿಂದ ಬಂದ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ, ಸಂತನಿಗೆ ನಮಸ್ಕಾರ ಸಲ್ಲಿಸುತ್ತಾರೆ. ಶ್ರೀ ಶರಣಬಸವೇಶ್ವರರು ಇಡೀ ಮಾನವ ಕುಲಕ್ಕೆ ನಿಸ್ವಾರ್ಥ ಸೇವೆ ಮತ್ತು “ದಾಸೋಹ” ತತ್ತ್ವಶಾಸ್ತ್ರಕ್ಕೆ ಹೊಸ ನಿರ್ದೇಶನವನ್ನು ನೀಡಿದವರು. ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ನಾಗರಿಕ ಸೌಲಭ್ಯಗಳು ಮತ್ತು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವುದೂ ಸೇರಿದಂತೆ ಹೆಚ್ಚಿನ ಸೌಲಭ್ಯಗಳು ಈ ದೇವಾಲಯಕ್ಕೆ ಅಗತ್ಯವಿದೆ ಎಂದು ಅವರು ಹೇಳಿದರು.
ಪ್ರತಿ ವರ್ಷ ಲಕ್ಷಾಂತರ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. 2017-2018 ಮತ್ತು 2018-2019ರ ಅವಧಿಯಲ್ಲಿ 20 ಲಕ್ಷ ಮತ್ತು 24 ಲಕ್ಷ ಯಾತ್ರಾರ್ಥಿಗಳು ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದ ಅವರು, ವಾರ್ಷಿಕ ರಥೋತ್ಸವದ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ದೇವಾಲಯದಲ್ಲಿ ಸೌಲಭ್ಯಗಳು ಮತ್ತು ನಾಗರಿಕ ಸೌಲಭ್ಯಗಳನ್ನು ಸುಧಾರಿಸುವುದಾಗಿ ತುರ್ತು ಅಗತ್ಯವಿದೆ ಎಂದರು.
ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ವಸತಿ ನಿಲಯವನ್ನು ನಿರ್ಮಿಸುವುದು, 50 ಲಕ್ಷ ರೂ.ಗಳ ವೆಚ್ಚದಲ್ಲಿ ದೇವಾಲಯದ ಆವರಣದ ತೋಟಗಾರಿಕೆ ಸೇರಿದಂತೆ ನಾಗರಿಕ ಸೌಲಭ್ಯಗಳ ಅಭಿವೃದ್ಧಿಗೆ 2.25 ಕೋಟಿ ರೂ.ಗಳ ಮೊತ್ತವನ್ನು ಮಂಜೂರು ಮಾಡುವಂತೆ ಡಾ. ಅಪ್ಪಾ ಅವರು ಸಚಿವರಿಗೆ ಮನವಿ ಮಾಡಿದರು.
25 ಲಕ್ಷ ರೂ.ಗಳ ವೆಚ್ಚದಲ್ಲಿ ಆರ್‍ಒ ವಾಟರ್ ಪ್ಯೂರಿಫೈಯರ್‍ಗಳನ್ನು ಅಳವಡಿಸಲಾಗುತ್ತಿದೆ. ಪಾಕಿರ್ಂಗ್ ಸೌಲಭ್ಯ ಸುಧಾರಿಸಲು 25 ಲಕ್ಷರೂ.ಗಳು ಮತ್ತು 25 ಲಕ್ಷ ರೂ.ಗಳ ವೆಚ್ಚದಲ್ಲಿ ಶೌಚಾಲಯಗಳ ನಿರ್ಮಾಣ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಅವರು ಸಚಿವರಿಗೆ ತಿಳಿಸಿದರು.