ಶರಣಧರ್ಮ ಸ್ವತಂತ್ರಧರ್ಮ:ಸಿದ್ದರಾಮಯ್ಯ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.28: ಶರಣಧರ್ಮ ಸ್ವತಂತ್ರಧರ್ಮವಾಗಿದ್ದು, ಅದನ್ನುಜಾತಿಗೆ ಸೀಮಿತಗೊಳಿಸಿದರೆ ಬಸವಣ್ಣನವರಿಗೆಅವಮಾನ ಮಾಡಿದಂತೆಎಂದುಕನ್ನಡಅಭಿವೃದ್ಧಿ ಪ್ರಾಧಿಕಾರದ ಮಾಜಿಅಧ್ಯಕ್ಷ ಪೆÇ್ರ. ಎಸ್. ಜಿ. ಸಿದ್ಧರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹಡಾ.ಫ.ಗು.ಹಳಕಟ್ಟಿ ಸಂಶೋದಕೇಂದ್ರದಚಿಂತನ- ಸಾಹಿತ್ಯ ಬಳಗ ಆಯೋಜಿಸಿದ್ದ ಬಿ.ಎಲ್.ಡಿ.ಇ ಸಂಸ್ಥೆಯನ್ನುಕಟ್ಟಿ ಬೆಳೆಸಿದ ಡಾ.ಫ.ಗು. ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ. ಬಿ. ಎಂ.ಪಾಟೀಲ ಹಾಗೂ ಬಂಗಾರಮ್ಮ ಸಜ್ಜನಅವರ ಸ್ಮರಣೆಕಾರ್ಯಕ್ರಮದಲ್ಲಿ ವಚನ ಧರ್ಮ ವಿಷಯಕುರಿತುಅವರುಉಪನ್ಯಾಸ ನೀಡಿದರು.
ಡಾ. ಫ.ಗು. ಹಳಕಟ್ಟಿ ಅವರು ಕಳೆದು ಹೋಗಿದ್ದಜ್ಞಾನಸಂಪತ್ತು ವಚನ ಧರ್ಮವನ್ನುಜಗತ್ತಿಗೆ ತೋರಿಸಿದ ಮಹಾನ್‍ಚೇತನರಾಗಿದ್ದಾರೆ. ಸತ್ಯ, ಶುದ್ಧ, ಕಾಯಕಜೀವಿಯಾಗಿದ್ದಅವರು, ವಚನಗಳನ್ನು ಸಂರಕ್ಷಿಸಿ ಪ್ರಕಟಿಸುವ ಮೂಲಕ ಜ್ಞಾನದಾಸೋಹಿಯಾಗಿದ್ದಾರೆ.ಬಂಥನಾಳ ಸಂಗನಬಸವ ಶಿವಯೋಗಿಗಳ ದೂರದೃಷ್ಠಿಯ ಫಲವಾಗಿ ವಿಜಯಪುರ ಈಗ ವಿದ್ಯಾಕ್ಷೇತ್ರವಾಗಿ ಬೆಳೆಯುತ್ತಿದೆ.ಮಾಜಿ ಸಚಿವ ದಿ. ಬಿ. ಎಂ.ಪಾಟೀಲರು ಸಭ್ಯ, ಪರಿಶುದ್ಧರಾಜಕೀಯದಜೊತೆಗೆ ವಿಜಯಪುರಜಿಲ್ಲೆಯನ್ನು ಶೈಕ್ಷಣಿಕವಾಗಿ ನಾಡಿನಾದ್ಯಂತ ಹೆಸರು ಮಾಡುವಕಾಯಕ ಮಾಡಿದ್ದಾರೆ. ಬಂಗಾರಮ್ಮ ಸಜ್ಜನಅವರುಜ್ಞಾನದಾಸೋಹಕ್ಷೇತ್ರಕ್ಕೆಜಮೀನು ನೀಡುವ ಮೂಲಕ ಪೆÇೀಷಿಸಿದ್ದಾರೆ ಎಂದುಅವರು ಹೇಳಿದರು.
ಜಗತ್ತಿನಎಲ್ಲ ಧರ್ಮಗಳ ಜೊತೆತುಲನೆ ಮಾಡಿದಾಗಕನ್ನಡಿಗರ ವಚನ ಧರ್ಮದ ಅಸ್ಮಿತೆಯ ಅರಿವಾಗುತ್ತದೆ. ಏಕವ್ಯಕ್ತಿ ಸಾಹಿತ್ಯಕ್ರಾಂತಿಗೆಕಾರಣಾದರೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಂದಿರುವ ಶರಣರ ವಚನ ಸಾಹಿತ್ಯ ಸಾಮಾಜಿಕ ಬದಲಾಣೆಗೆ ಪ್ರೇರಣೆಯಾಗಿವೆ.ಶರಣರ ವಚನಗಳು ಸಂವಾದದರೀತಿಯಲ್ಲಿದ್ದು, ಆಯಾ ಸಮುದಾಯಗಳ ಸಮಸ್ಯೆ, ಅವುಗಳಿಗೆ ಪರಿಹಾರ, ಮತ್ತು ಸಮೂಹ ಪ್ರಜ್ಞೆಯನ್ನು ವಚನಗಳು ರೂಪಿತವಾಗಿವೆ.12ನೇ ಶತಮಾನದ ಶರಣರ ವಚನಗಳು ವಚನಧರ್ಮದ ಗ್ರಂಥಗಳಾಗಿದ್ದು, ನಂತರದ ಹುಟ್ಟಿದ ವಚನಗಳು ಛಾಯಾ ವಚನಗಳಾಗಿವೆ.ವರ್ಣಗಳ ವ್ಯವಸ್ಥೆ ವಿರೋಧಿಸಿ ವಚನಗಳು ಜನ್ಮತಾಳಿವೆ.ಭಾರತದಲ್ಲಿಅಸಮಾನತೆ ಮತ್ತುದಯೆಯಿಲ್ಲದ ಧರ್ಮಗಳ ವಿರುದ್ಧಇತರ ಧರ್ಮಗಳು ಹುಟ್ಟಿವೆ.ವೈದಿಕ ಧರ್ಮದಲ್ಲಿರುವ ಅನಿಷ್ಠಗಳನ್ನು ವಿರೋಧಿಸಿ, ಅದರಲ್ಲಿರುವ ಒಳ್ಳೆಯ ಗುಣಗಳ ಜೊತೆಗೆ ಪ್ರಜಾಪ್ರಭುತ್ವಕ್ಕೆ ಪೂರಕವಾದ ಮತ್ತುದಯೆಯನ್ನು ಮೂಲವಾಗಿಟ್ಟುಕೊಂಡು ವಚನಧರ್ಮ ಜನ್ಮತಾಳಿದೆ.ವಚನಕಾರರು ವೈದಿಕ ಧರ್ಮವನ್ನು ವಿರೋಧಿಸಿದರೆ ಹೊರತು ಉಪನಿಷತ್ತುಗಳನ್ನಲ್ಲ.ಏಕೆಂದರೆ ಅವು ನಿಸರ್ಗದ ವಿಚಾರಗಳನ್ನು ಒಳಗೊಂಡಿವೆ ಎಂದುಅವರು ಹೇಳಿದರು.
ನಮ್ಮ ಸಮಾಜ ಸಾಂಸ್ಕøತಿಕಜೀತದಿಂದಇನ್ನೂ ಹೊರಬಂದಿಲ್ಲ.ಸಾಂಸ್ಕೃತಿಕ ಸ್ವಾತಂತ್ರ್ಯವಿಲ್ಲದರಾಜಕೀಯ ಸ್ವಾತಂತ್ರ್ಯಅಪೂರ್ಣವಾಗಿದೆ.ಇದು ಹೋಗಬೇಕಿದೆ.ಪ್ರಜಾಪ್ರಭುತ್ವ ನಿಲುವಿನ ಮತ್ತುಎಲ್ಲ ಸಮೂಹಗಳ ನಿಷ್ಠೆಗೆ ವಚನ ಧರ್ಮ ಬೇಕಿದೆಎಂದು ಪೆÇ್ರ.ಎಸ್. ಜಿ. ಸಿದ್ಧರಾಮಯ್ಯ ಹೇಳಿದರು.
ಚಿತ್ತರಗಿ- ಇಳಕಲ್ಲ ಶ್ರೀ ವಿಜಯಮಹಾಂತೇಶ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಮಹಾಸ್ವಾಮೀಜಿ ಮಾತನಾಡಿ, ಸಂಸಾರ ಬಿಟ್ಟುಕಾಡಿಗೆ ಹೋಗಿ ದೇವರದರ್ಶನ ಮಾಡುವ ಬದಲು ಮನೆಯಲ್ಲಿಯೇ ಕುಳಿತು ಲಿಂಗ ಪೂಜೆಯ ಮೂಲಕ ಏಕಾಗ್ರತೆ ಸಾಧಿಸಿ ದೇವರದರ್ಶನ ಪಡೆಯಲು 12ನೇ ಶತಮಾನದಲ್ಲಿ ಬಸವಣ್ಣನವರುಇಷ್ಟಲಿಂಗ ಪೂಜೆ ಪರಿಕಲ್ಪನೆಯನ್ನುಜಾರಿಗೆತಂದರು. ಈ ಇಷ್ಟಲಿಂಗಕ್ಕೆ ವಿಶ್ವದರೂಪ ನೀಡಿದರು.ಈ ಮೂಲಕ ಜನರಲ್ಲಿದ್ದದೇವರ ಹಸಿವನ್ನು ನೀಗಿಸಲು ಕಾರಣರಾದರು.ಇಷ್ಟಲಿಂಗ ಪೂಜೆ ಮನುಷ್ಯನಲ್ಲಿಏಕಾಗ್ರತೆಯನ್ನು ಹೆಚ್ಚಿಸುತ್ತವೆ.ಚಂಚಲತೆಯನ್ನು ತೊಲಗಿಸಿ ಮನಸ್ಸನ್ನು ನಿಯಂತ್ರಿಸುವುದರಿಂದ ಆ ವ್ಯಕ್ತಿ ಮಹಾನ್ ಆಗಲು ಸಾಧ್ಯವಾಗುತ್ತದೆ.ಜಾತಿಗಿಂತಅರಿವಿನಿಂದದೊಡ್ಡವನಾಗಲು ಸಾಧ್ಯವಾಗುತ್ತದೆಎಂದು ಹೇಳಿದರು.
ಹಳಕಟ್ಟಿಯವರು ವಚನ ಸಂಗ್ರಹಿಸಿ ಬಸವಣ್ಣನವರನ್ನು ಬದುಕಿಸಿದರು. ಹಳಕಟ್ಟಿಯವರನ್ನು ಎಂ. ಬಿ. ಪಾಟೀಲರು ಶಾಶ್ವತವಾಗಿ ಪರಿಚಯಿಸಿದರು.ಈ ಮೂಲಕ ರಾಜಕೀಯದಜೊತೆಅವರದಾರ್ಶನಿಕಕ್ಷೇತ್ರದಲ್ಲಿಯೂಅವರು ಪರಿಚಯಿತರಾಗಿದ್ದಾರೆ.ಜಲಸಂಪನ್ಮೂಲ ಸಚಿವರಾಗಿ ನೀರಾವಿ ಮಾಡಿ ಶಾಶ್ವತ ಪರಿಹಾರ ಒದಗಿಸಿದ್ದಾರೆ. ಬಿ.ಎಲ್.ಡಿ.ಇ ಸಂಸ್ಥೆಯನ್ನುಕಟ್ಟಿ ಬೆಳೆಸಿದ ನಾಲ್ಕು ಜನದಾರ್ಶನಿಕರಜೊತೆಇವರು 5ನೇ ದಾರ್ಶನಿಕರಾಗಿದ್ದಾರೆಎಂದು ಹೇಳಿದರು.
ಡಾ. ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ಬಿ.ಎಲ್. ಡಿ. ಇ ಸಂಸ್ಥೆಯಕಟ್ಟಿ ಬೆಳೆಸುವಲ್ಲಿ ನಾಲ್ಕೂ ಜನ ಮಹನೀಯರುತಮ್ಮತನು, ಮನ ಮತ್ತುಧನದಿಂದ ಮಾಡಿದಕಾಯಕವನ್ನುಉದಾಹರಣೆ ಸಹಿತ ಮನಮುಟ್ಟುವಂತೆ ವಿವರಿಸಿದರು.ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮಕೈಗಾರಿಕೆ, ಮೂಲಸೌಲಭ್ಯಅಭಿವೃದ್ಧಿ ಹಾಗೂ ವಿಜಯಪುರಜಿಲ್ಲಾಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇಡೀಮ್ಡ್ ವಿವಿಯ ಸಮಕುಲಾಧಿಪತಿಡಾ.ಜೈರಾಜ್, ಕುಲಪತಿಡಾ. ಆರ್.ಎಸ್. ಮುಧೋಳ, ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಆರ್. ಬಿ. ಕೊಟ್ನಾಳ, ಅರುಣಕುಮಾರ ಶಹಾ, ಅಶೋಕ ವಾರದ, ನ್ಯಾಯವಾದಿ ಅರವಿಂದ ಹಿರೊಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಬಿ.ಎಂ.ಪಾಟೀಲ ಶಾಲೆಯ ವಿದ್ಯಾರ್ಥಿಗಳು ಸಂಸ್ಥಾಪನೆ ಗೀತೆ ಹಾಡಿದರು.ಮುತ್ತರಾಜ ಮಾದನಭಾವಿ ಮತ್ತು ಸುನಂದಾಘಾಟಗೆ ವಚನ ಗಾಯನ ಹೇಳಿದರು. ವಿ. ಡಿ. ಐಹೊಳ್ಳಿ ನಿರೂಪಿಸಿದರು. ಡಾ. ಎ. ಬಿ. ಬೂದಿಹಾಳ ವಂದಿಸಿದರು.