ಶರಣಗೌಡ ಬಯ್ಯಾಪೂರಿಗೆ ಅತಿಹೆಚ್ಚು ಮತಗಳಿಂದ ಗೆಲ್ಲಿಸಿ-ಅಯ್ಯಪ್ಪಗೌಡ

ಗಬ್ಬೂರು.೨೫-ರಾಯಚೂರು ಹಾಗೂ ಕೊಪ್ಪಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸರಳ ಸಜ್ಜನ ರಾಜಕರಣಿ, ಯುವಕರ ಕಣ್ಮಣಿ, ಅಭಿವೃದ್ಧಿಯ ಹರಿಕಾರ, ಶರಣಗೌಡ ಬಯ್ಯಾಪೂರ ರವರಿಗೆ ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದು ಮತದಾರರಲ್ಲಿ ಕಾಂಗ್ರೆಸ್ ಮುಖಂಡರು ಅಯ್ಯಪ್ಪಗೌಡ ಗಬ್ಬೂರು ಮನವಿ ಮಾಡಿದ್ದರೆ.
ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಸರ್ಕಾರದಲ್ಲಿ ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಹಾಗೂ ವಿಶೇಷವಾಗಿ ಗ್ರಾಮ ಪಂಚಾಯತ್‌ಗಳಿಗೆ ಅತಿ ಹೆಚ್ಚು ಅನುದಾನ ಕೊಟ್ಟಿದ್ದರೆ.
ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಗ್ರಾಮೀಣ ಪ್ರದೇಶಗಳಲ್ಲಿರುವ ಹಳ್ಳಿಗಳು ಮೇಲೆ ಬರಲು ಅಭಿವೃದ್ಧಿಯ ಸಲುವಾಗಿ ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದರು.
ಅನ್ನಭಾಗ್ಯ, ಸಾಲಮನ್ನಾ, ಕ್ಷೀರಧಾರೆ, ಶಾದಿಭಾಗ್ಯ, ಬಡಜನರ ಹಿತ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಭಾಗ್ಯಗಳನ್ನು ಕೊಟ್ಟ ಸರದಾರ ಎಂದು ಜನ ಸಾಮನ್ಯರು ಬಿರುದು ಕೊಟ್ಟಿದ್ದರೆ.
ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರ ದಿನೇ ದಿನೇ ಬೆಲೆ ಏರಿಕೆ, ಇಳಿಕೆ ವಿರುದ್ದ ಜನ ಸಂಕಷ್ಟದಿಂದ ಜೀವನ ಸಾಗಿಸುತ್ತಿದ್ದರೆ. ಜಿ.ಎಸ್.ಟಿ ಹಾಗೂ ಸರಿಯಾದ ಸಮಯಕ್ಕೆ ರೈತರಿಗೆ ಬೆಳೆ ಪರಿಹಾರ ಧನ ದೊರಕದೆ ಅನ್ನದಾತರು ಕಣ್ಣೀರು ಹಾಕಿದ್ದರೆ.
ಬಿಜೆಪಿ ಸರ್ಕಾರದ ವಿರುದ್ಧ ದಿನೇ ದಿನೇ ರೈತರು, ಪ್ರಗತಿಪರ ಸಂಘನೆಗಳು, ಹೋರಾಟಗಳು ನಡೆಯುತ್ತಿವೆ ಬಡವರ ಪರ ಸರ್ಕಾರವಲ್ಲ ಎಂದು ಸಾರ್ವಜನಿಕರು ಮಾತನಾಡುತ್ತಿದ್ದರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ತಕ್ಕಪಾಠ ಕಲಿಸಲು ಸಿದ್ದರಾಗಿದ್ದರೆ.
ಎರಡು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಲು ಸಿದ್ದರಿದ್ದರೆ. ಡಿಸೆಂಬರ್ ೧೦ ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡು ಜಿಲ್ಲೆಗಳ ಅಭಿವೃದ್ಧಿ ದೃಷ್ಠಿಯಿಂದ ಶರಣಗೌಡ ಬಯ್ಯಾಪೂರಿಗೆ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದು ಅಯ್ಯಪ್ಪಗೌಡ ಗಬ್ಬೂರು ಮತದಾರರಲ್ಲಿ ಮನವಿ ಮಾಡಿ ಸಂಜೆ ವಾಣಿಗೆ ತಿಳಿಸಿದರು.