ಶಮಶೀರನಗರ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

ಬೀದರ : ಮಾ.15:ತಾಲೂಕಿನ ಶಮಶಿರನಗರದ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಎಂಟನೇಯ ತರಗತಿಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು.

ವಿಜ್ಞಾನ ದಿನಾಚರಣೆ ಅಂಗವಾಗಿ ಶಾಲೆಯ ವಿಜ್ಞಾನ ಶಿಕ್ಷಕಿ ಗೋದಾವರಿ ಪಾಟೀಲ ಅವರು ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ , ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಿದರು, ವಿದ್ಯಾರ್ಥಿಗಳುಗಳು ವಿವಿಧ ರೀತಿಯ ವೈಜ್ಞಾನಿಕ, ಪ್ರಾಯೋಗಿಕ ಹಾಗೂ ಚಿತ್ರಕಲಾ ಪ್ರದರ್ಶನ ಮಾಡಿದರು. ಮಕ್ಕಳ ಆವಿಷ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಾಯೋಗಿಕ ವಿಧಿ ವಿಧಾನಗಳನ್ನು ತೊರಪಡಿಸುವ ಮುಖಾಂತರ ವಿವರಿಸಿದರು. ಮೇಳದಲ್ಲಿ ಮಕ್ಕಳ ಪ್ರಾಯೋಗಿಕ ವಿಜ್ಞಾನ ಮತ್ತು ಚಿತ್ರಕಲೆಗಳು ಗಮನ ಸೆಳೆದರು, ಈ ಸಂದರ್ಭದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಗುರು ಸಂಜೀವಕುಮಾರ ಮೇಟಿ, ಚಂದ್ರಕಾಂತ, ಶಾಲಿವಾನ ಸಿದ್ಧಬಟ್ಟೆ, ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.