ಶಬರಿ ಸಂಕಲ್ಪ ಸನ್ನಧಾನದಲ್ಲಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರಿಗೆ ತುಲಾಭಾರ

ಕಲಬುರಗಿ :ಸೆ.4: ನಗರದ ಅಪ್ಪನ ಕೆರೆ ಹತ್ತಿರದ ಕಲ್ಯಾಣಿ ಕಲ್ಯಾಣ ಮಂಟಪದ ಹತ್ತಿರದ ಶಬರಿ ಸಂಕಲ್ಪ ಸನ್ನಿಧಾನದಲ್ಲಿ ಕಳೆದ 40 ದಿನಗಳಿಂದ ನಿರಂತರವಾಗಿ ಅಯ್ಯುಪ್ಪ ಸ್ವಾಮಿ ಭಕ್ತರು ಮಾಲೆ ಧರಿಸಿ ಕಠಿಣ ವೃತ್ತ ಆಚರಣೆಯ ಮುಕ್ತಾಯದ ಅಂಗವಾಗಿ ಇರುಮುಡಿ ಮಹಾಪೂಜೆ ಕಾರ್ಯಕ್ರಮದಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರಿಗೆ ನಾಣ್ಯದಿಂದ ತುಲಾಭಾರ ಮಾಡಲಾಯಿತು.

ಗುರುಸ್ವಾಮಿ ತುಕಾರಾಮ ಚಿತ್ತಾಪೂರ ಅವರ ನೇತೃತ್ವದಲ್ಲಿ ಸುಮಾರು 65 ಮಾಲಾಧಾರಿಗಳು ಕಠಿಣ ವೃತ್ತದೊಂದಿಗೆ ಅಯ್ಯಪ್ಪ ಸ್ವಾಮಿ ಅವರ ಧ್ಯಾನ, ಹಾಗೂ ಶ್ರದ್ಧಾ-ಭಕ್ತಿ ಯಿಂದ ಪೂಜೆ ನೆರವೇರಿತು. ಮಹಾಮಂಗಳಾರತಿ ನಡೆಯಿತು. ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಗೋವಾ ಹೋಟೆಲ್, ಕಲ್ಯಾಣಿ ಪೆಟ್ರೋಲ್ ಬಂಕ್ ಮಾರ್ಗವಾಗಿ ಕಲ್ಯಾಣಿ ಕಲ್ಯಾಣ ಮಂಟಪದ ಹತ್ತಿರದ ಶಬರಿ ಸಂಕಲ್ಪ ಸನ್ನಿಧಾನದವರೆಗೆ ಭವ್ಯ ಮೆರವಣಿಗೆ ನಡೆಯಿತು.

ಗುರುಸ್ವಾಮಿಗಳಾದ ಬಸಯ್ಯ ಸಾಲಿಮಠ, ನಾಗರಾಜ ಸಜ್ಜನ, ಚಂದ್ರು ಮಾಲೀಪಾಟೀಲ, 18 ವರ್ಷ ಪೂರೈಸಿದ ಗುರುಸ್ವಾಮಿಗಳಾದ ತುಕಾರಾಮ ಜಿ. ಚಿತ್ತಾಪೂರ ಇವರಿಗೆ ಸಕಲ ಶ್ರೀಗಳಿಂದ ತೆಂಗಿನ ಸಸಿಯನ್ನು ಸಮರ್ಪಿಸಿ ಆಶೀರ್ವದಿಸಿದರು.

ಈ ಕಾರ್ಯಕ್ರಮದಲ್ಲಿ ಸುಕ್ಷೇತ್ರ ಶ್ರೀನಿವಾಸ ಸರಡಗಿಯ ಡಾ. ಅಪ್ಪಾರಾವ ಮುತ್ಯಾ, ಸುಕ್ಷೇತ್ರ ನರನಾಳ ಸೊಂತದ ಶಿವಕುಮಾರ ಶಿವಾಚಾರ್ಯರು, ಮುಲ್ಲಾಮಾರಿ ತೀರದ ಶಂಕರಲಿಂಗ ಮಹಾರಾಜರು, ಚವದಾಪೂರ ಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು, ಅತನೂರ ಸಂಸ್ಥಾನ ಮಠದ ಶ್ರೀ ಅಭಿನವ ಗುರುಬಸವ ಶೀವಾಚಾರ್ಯರು ಸಾನಿಧ್ಯ ವಹಿಸಿದರು. ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಡಾ.ದಾಕ್ಷಾಯಿಣಿ ಎಸ್.ಅಪ್ಪ, ಶ್ರೀ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ದೇಶಮುಖ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಮಾಜಿ ಸಚಿವ ರೇವುನಾಯಕ ಬೇಳಮಗಿ, ನ್ನಿಧಾನ ಸ್ಥಳದ ದಾನಿಗಳಾದ ರುದ್ರಶೆಟ್ಟಿ ಕಲ್ಯಾಣಿ, ಮುಖಂಡರಾದ ಮೌನೇಶ ಬಿರಾದಾರ, ಸಂಗಣಗೌಡ ಪಾಟೀಲ, ರಮೇಶ ತಿಪನೂರ, ಗೋರಕನಾಥ ಶಾಖಪೂರೆ, ಅಂಬರೀಶ ಬಿರಾದರ, ಗುರುಸ್ವಾಮಿಗಳಾದ ತುಕಾರಾಮ ಚಿತ್ತಾಪೂರ, ಕಣ್ಣಿ, ಕತ್ತಿ, ಘಂಟೆ, ಗಾಧಾ, ಕಲ್ಲಪ್ಪ ಯಾದವ, ದೀಪಕ ಹೊಡಲ್, ವಿಶ್ವಾನಾಥ ಜೀವಣಗಿ, ಪ್ರಮೋದ ಧುಮಾಳೆ, ಶ್ರೀನಿವಾಸ ರಂಚೇರಿ, ಪ್ರಜ್ವಲ್ ವೆಂಕಟರಾವ, ರಾಜು ಲಾರಾ ಟೇಲರ್, ಪವನ ಆರ್. ಚಿತ್ತಾಪೂರ, ಅಭೀಶೇಖ ಪಟ್ಟರೆಡ್ಡಿ ಸೇರಿದಂತೆ ಅನೇಕರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಇದ್ದರು