ಶಬರಿಯಾದ ರಚಿತಾ ಥ್ರಿಲ್ಲರ್ ಹಿಂದೆ ಡಿಂಪಲ್

ಚಿಕ್ಕನೆಟಕುಂಟೆ .ಜಿ. ರಮೇಶ್

“ಶಬರಿ ಸರ್ಚಿಂಗ್ ಫಾರ್ ರಾವಣ” ಅರೆ ಏನಿದು. ಶಬರಿ ರಾಮನಿಗೆ ತಾನೆ ಕಾಯುತ್ತಿದ್ದು. ಇಲ್ಲಿ ರಾವಣನಿಗೆ ಎನ್ನುವ ಕುತುಹಲವೇ.. ಡಿಂಪಲ್ ಕ್ವೀನ್ ರಚಿತಾ ರಾಮ್ ಇತ್ತೀಚೆಗೆ ವಿಭಿನ್ನ ಬಗೆಯ ಪಾತ್ರಗಳು ಮತ್ತು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಅದರ ಸಾಲಿಗೆ ಮತ್ತೊಂದು ಸೇರ್ಪಡೆ ” ಶಬರಿ ಸರ್ಚಿಂಗ್ ಫಾರ್ ರಾವಣ’.

ಬ್ಯಾಡ್ ಮ್ಯಾನರ್ಸ್, ರಚ್ಚು ಐ ಲವ್ ಯು, ವೀರಂ, ಮ್ಯಾಟ್ನಿ, ಲಿಲ್ಲಿ, ಏಪ್ರಿಲ್, ಡಾಲಿ ಸೇರಿದಂತೆ ಅನೇಕ‌ ಚಿತ್ರಗಳು ರಚಿತಾ ಕೈಯಲ್ಲಿವೆ ಅದರ ಸಾಲಿಗೆ ಶಬರಿಯೂ ಹೊಸ ಸೇರ್ಪಡೆ.

ಶಬರಿ ಮತ್ತೊಂದು ಮಹಿಳಾ ಪ್ರಧಾನ ಚಿತ್ರ. ರಿವೇಂಜ್,ಥ್ರಿಲ್ಲರ್ ಕಥಾ ಹಂದರವಿರುವ ಚಿತ್ರದಲ್ಲಿ ಹೊಸತನದ ಪಾತ್ರದಲ್ಲಿ ರಚಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಇದು ಅವರ 36 ನೇ ಚಿತ್ರ. ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಯುವ‌ ನಿರ್ದೇಶಕ ನವೀನ್‍ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ

ಶ್ರೀರಾಮನವಮಿಯ ದಿನದಂದು ರಚಿತಾರಾಮ್ ಶಬರಿಯಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ.ಅದರಲ್ಲಿ ರಚಿತಾ ಉಗ್ರಾವತಾರ ತಾಳಿದ್ದಾರೆ.

ಚಿತ್ರದ ವಿಭಿನ್ನಲುಕ್ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಸಂಕಲನಕಾರರಾಗಿ ಗುರುತಿಸಿಕೊಂಡಿರುವ ನವೀನ್ ಶೆಟ್ಟಿ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ.

ಮಹಿಳಾಪ್ರಧಾನ ಕಥಾಹಂದರ ಒಳಗೊಂಡಿರುವ ಈ ಚಿತ್ರದಲ್ಲಿ ರಾವಣ ಯಾರಾಗಲಿದ್ದಾರೆ ಎನ್ನುವುದು ಇನ್ನೂ ಕುತೂಹಲವಾಗಿದೆ. ಕೊರೋನಾ ಸೋ‌ಂಕು ಕಡಿಮೆಯಾದರೆ ಮೇ ತಿಂಗಳ ಕೊನೆಯಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭಿಸುವುದಾಗಿ ನಿರ್ದೇಶಕ ನವೀನ್ ಶೆಟ್ಟಿ ತಿಳಿಸಿದ್ದಾರೆ. ಇನ್ನು ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಇದ್ದು, ಸುರೇಶ್ ಆರ್ಮುಗಂ ಅವರ ಸಂಕಲನ, ವಿಶಾಲ್‍ಕುಮಾರ್ ಗೌಡ ಅವರ ಕ್ಯಾಮೆರಾವರ್ಕ್ ಚಿತ್ರಕ್ಕಿರಲಿದೆ.

ರಘು ಮುಖರ್ಜಿ, ಅಚ್ಯುತ್‍ಕುಮಾರ್, ಪ್ರದೀಪ್ ನಾರಾಯಣ್, ಅರ್ಚನಾ ಕೊಟ್ಟಿಗೆ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

ಹೊಸತನದ ಪಾತ್ರ

ಸ್ಟಾರ್ ನಟರ ಚಿತ್ರಗಳಿಗೆ ಸೀಮಿತವಾಗಿದ್ದ ನಟಿ ರಚಿತಾ ರಾಮ್ ಇದೀಗ ಹೊಸ ನಿರ್ದೇಶಕರು, ನಟರ‌ ಜೊತೆ ನಟಿಸುವ ಮೂಲಕ ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ. ಅದರಲ್ಲೂ ಇತ್ತೀಚೆಗೆ ಮಹಿಳಾ ಪ್ರಧಾನ ಪಾತ್ರಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ರಚಿತಾರಾಮ್‌ ಪತ್ರಕರ್ತರಿಗ ಕೈಗೂ ಸಿಗದಂತಾಗಿದ್ದಾರೆ. ಅವರ ಅಲಕ್ಷ್ಯವೋ ಸಿನಿಮಾ‌ ಒತ್ತಡವೋ ಅವರನ್ನು ಬಲ್ಲ ನಿರ್ದೇಶಕರು ,ಚಿತ್ರತಂಡ ಹೇಳಬೇಕು.