ಶತ ಪ್ರತಿಶತ ಮತದಾನ ಮಾಡಲು ವಿಶ್ವ ಹಿಂದೂ ಪರಿಷತ್ ಕರೆ

module: j; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 186.27534; hist255: 0.0; hist252~255: 0.0; hist0~15: 0.0;

ಕೊಲ್ಹಾರ:ಮೇ.4: ದೇಶ ಸುಭಿಕ್ಷವಾಗಿ, ಸುರಕ್ಷಿತವಾಗಿ ಇರಬೇಕಾದಲ್ಲಿ ಹಿಂದು ಸಮಾಜ ಒಗ್ಗೂಡಬೇಕು, ದೇಶದ ಬಹುಸಂಖ್ಯಾತ ಹಿಂದುಗಳು 100 ಪ್ರತಿಶತ: ಮತದಾನ ಮಾಡಬೇಕು ಎಂದು ವಿಶ್ವ ಹಿಂದು ಪರಿಷತ್ ಭಜರಂಗದಳ ಜಿಲ್ಲಾ ಕಾರ್ಯದರ್ಶಿ ಸಿದ್ದು ಹೂಗಾರ್ ಹೇಳಿದರು.
ಪಟ್ಟಣದ ಶೀಲವಂತ ಹಿರೇಮಠದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಂಡು ಅವರು ಮಾತನಾಡಿದರು ಸುರಕ್ಷಿತ ಭಾರತ ನಿರ್ಮಾಣಕ್ಕಾಗಿ, ದೇಶದ ವಿಕಾಸಕ್ಕಾಗಿ, ಭಷ್ಟಾಚಾರರಹಿತ ಆಡಳಿತ, ಸಮರ್ಥ ನಾಯಕತ್ವ, ರಾಷ್ಟ್ರೀಯ ಸುರಕ್ಷತೆಗೆ ಒತ್ತು, ಜನತೆಗೆ ಸ್ವಾಭಿಮಾನದ ಬದುಕು, ಸದೃಢ ಆರ್ಥಿಕತೆ ಸರ್ವರ ವಿಕಾಸದ ಪರಿಕಲ್ಪನೆ ನೀಡುವುದು ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.

ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು ಮಾತನಾಡಿ ದೇಶಕ್ಕಾಗಿ ಸರ್ವಸ್ವವನ್ನು ಸಮರ್ಪಣೆ ಮಾಡಿಕೊಳ್ಳುವಂತಹ ನಾಯಕತ್ವ ಗುಣವುಳ್ಳ ನರೇಂದ್ರ ಮೋದಿಯವರ ಆಯ್ಕೆ ಹಿಂದೂ ಸಮಾಜದ ಗುರಿಯಾಗಬೇಕು, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ದೇಶ ವಿಶ್ವಗುರುವಾಗುವತ್ತಾ ಸಾಗುತ್ತಿದೆ, ವಿದೇಶಗಳಲ್ಲಿ ನಮ್ಮ ದೇಶದ ಪರಿಕಲ್ಪನೆ ಬದಲಾಗಿದೆ ನಮ್ಮ ಶಕ್ತಿ ಅರಿವಾಗಿದೆ ಇದಕ್ಕೆ ಕಾರಣ ನರೇಂದ್ರ ಮೋದಿ ಹಾಗಾಗಿ ಹಿಂದೂ ಸಮಾಜ ಒಂದಾಗಿ ಪ್ರತಿಶತ 100 ರಷ್ಟು ಮತದಾನ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಮೇಶ ಗುಳಬಾಳ ಮಠ, ಮಂದಿರ ಪ್ರಮುಖರು ಭೀಮಾಶಂಕರ ವನುಡುಗಿ,
ಹನುಮಂತ ಮುಳವಾಡ ಜಿಲ್ಲಾ ಸುರಕ್ಷಾ ಪ್ರಮುಖರು, ಮಂಜುನಾಥ ಮುರನಾಳ, ಮಲ್ಲು ಉಪ್ಪಲದಿನ್ನಿ ಸಹಿತ ಅನೇಕರು ಇದ್ದರು.