ಶತಾಯುಷಿ ಮುದ್ದಡಗಾ ಶ್ರೀಗಳು ಇನ್ನಿಲ್ಲ

ಕಲಬುರಗಿ:ನ.15:ನಡೆದಾಡುವ ದೇವರು ಎಂದೇ ಖ್ಯಾತಿಗೊಂಡ ಜಿಲ್ಲೆಯ ಕಮಲಾಪೂರ್ ತಾಲ್ಲೂಕಿನ ಮುದ್ದಡಗಾ ಗ್ರಾಮದ ಶತಾಯುಷಿ ಸಂಗಮೇಶ್ವರ್ ಶಿವಚಾರ್ಯರು ಭಾನುವಾರ ಸಂಜೆ 5 ಗಂಟೆಯ ಸುಮಾರಿಗೆ ಅಸುನೀಗಿದರು. ಅವರಿಗೆ ಸುಮಾರು 101 ವರ್ಷ ವಯಸ್ಸಾಗಿತ್ತು.
ಸೋಮವಾರ, ನವೆಂಬರ್ 16ರಂದು ಬೆಳಿಗ್ಗೆ 10ರಿಂದ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಸದ್ಯೋಜಾತ ರೇಣುಕಾ ಶಿವಾಚಾರ್ಯರು ತಿಳಿಸಿದ್ದಾರೆ.