ಶತಾಯುಷಿ ಭೀಮವ್ವ ನಿಧನ

ಸುರಪುರ:ನ.13: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಿ ಹಾಳ ಗ್ರಾಮದಲ್ಲಿ ಶತಾಯುಷಿ ಅಜ್ಜಿ ಭೀಮವ್ವ (111) ಇಂದು ನಿಧನರಾಗಿದ್ದಾರೆ.

ದಿ: ಭೀಮವ್ವ ಗಂಡ ಹಣಮಂತ ದಂಪತಿಗೆ 9 ಮಕ್ಕಳಿದ್ದರು. ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳು ಸೇರಿ ಒಟ್ಟು 250 ಜನರು ಇವರ ಕುಟುಂಬದಲ್ಲಿದ್ದಾರೆ.

ಭೀಮವ್ವ 100ನೇ ವರ್ಷದಲ್ಲಿಯೂ ಮನೆಯಲ್ಲಿದ್ದಾಗ ಕೌದಿ ಹೊಲಿಯುದು, ಮೊಮ್ಮಕ್ಕಳ ಜೊತೆ ಆಟ ಆಡುವುದು, ಎಲ್ಲಾ ಮಕ್ಕಳೊಂದಿಗೆ ಸಹೃದಯದಿಂದ ಇದ್ದರು.

ಇನ್ನು 250 ಜನರು ಇರುವ ಇವರ ಫ್ಯಾಮಿಲಿಯಲ್ಲಿ ಅಜ್ಜಿಯ ಮಾತು ಯಾರು ಮಿರುತ್ತಿರಲಿಲ್ಲ. ಭೀಮವ್ವನ ಮಾತಿನಂತೆ ಎಲ್ಲರೂ ಒಗ್ಗೂಡಿ ಜೀವನ ಸಾಗುಸುತ್ತಿದ್ದರು.

ಇದಲ್ಲದೇ ಭೀಮವ್ವ ಹಬ್ಬ ಹರಿದಿನಗಳಲ್ಲಿ ಗ್ರಾಮದಲ್ಲಿ ತಾಯಿ ಯಲ್ಲಮ್ಮ ದೇವಿಯ ಮಹಾತಂಗಿ ಮಗಳಾಗಿ ವಿವಿಧ ರೀತಿಯ ಹಾಡುಗಳನ್ನು ಕೂಡ ಹಾಡಿತ್ತಿದ್ದರು.

ಇನ್ನು ಗ್ರಾಮದಲ್ಲಿ ಎಲ್ಲಾ ಸಮುದಾಯದವರ ಜೊತೆ ಹಾಗೂ ಹಿರಿಯ, ಕಿರಿಯರೊಂದಿಗೆ ಆತ್ಮೀಯವಾಗಿ ಮಾತನಾಡುತ್ತ ಭಾವನಾತ್ಮಕವಾಗಿ ಬೆರೆಯುತ್ತಿದ್ದರು.

ಶತಾಯುಷಿ ಭೀಮವ್ವ ಇಂದು ನಿಧನವಾಗಿದ್ದು, ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಇನ್ನು ಶತಾಯುಷಿ ಅಜ್ಜಿಯನ್ನ ಕಳೆದುಕೊಂಡ 250ಕ್ಕೂ ಹೆಚ್ಚು ಕುಟುಂಬದ ಜನರು ಅತೀವ ದುಃಖದಲ್ಲಿದ್ದಾರೆ.

ಇನ್ನು ಸ್ವಗ್ರಾಮ ಮಂಗಿಹಾಳದಲ್ಲಿ ಇಂದು ಸಂಜೆ ಅಂತ್ಯ ಸಂಸ್ಕಾರ ನೇರವೇರಲಿದೆ.