ಶತಾಯುಷಿ ನೀಲಮ್ಮ ಸಾಸನೂರ ಅವರಿಂದ ಮತದಾನ

ತಾಳಿಕೋಟೆ:ಮೇ.8: ತಾಲೂಕಿನ ತಮದಡ್ಡಿ ಗ್ರಾಮದ ಶತಾಯುಷಿ ಶ್ರೀಮತಿ ನೀಲಮ್ಮ ಈರಪ್ಪ ಸಾಸನೂರ(100) ವರ್ಷದ ಹಿರಿಯ ಅಜ್ಜಿ ತಮದಡ್ಡಿ ಗ್ರಾಮದ ಮತಗಟ್ಟೆ ನಂ.11 ರಲ್ಲಿ ತನ್ನ ಮತದಾನದ ಹಕ್ಕನ್ನು ಚಲಾಯಿಸಿದರು.
100 ವರ್ಷದ ವಯೋವೃದ್ದೆ ಶ್ರೀಮತಿ ನೀಲಮ್ಮ ಈರಪ್ಪ ಸಾಸನೂರ ಅವರು ತನ್ನ ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳ ಸಹಾಯದೊಂದಿಗೆ ಮತದಾನದ ಕೇಂದ್ರಕ್ಕೆ ಆಗಮಿಸಿ ಮತದಾನವನ್ನು ಮಾಡಿದರು.
ಈ ಸಮಯದಲ್ಲಿ ಶತಾಯುಷಿ ಹಿರಿಯ ಅಜ್ಜಿ ಶ್ರೀಮತಿ ನೀಲಮ್ಮ ಸಾಸನೂರ ಅವರಿಗೆ ಗ್ರಾಮದ ಮುಖಂಡರುಗಳು ಮತಗಟ್ಟೆಯ ಹೊರಗಡೆ ಪಕ್ಷ ಬೇದ ಮರೆತು ಎಲ್ಲರೂ ಸೇರಿ ಸನ್ಮಾನಿಸಿ ಹೂಗುಚ್ಚ ನೀಡಿ ಗೌರವಿಸಿದರು.
80 ವಯಸ್ಸಿನ ನಂತರ ವಯಸ್ಕರಿಗೆ ಮನೆಯಿಂದಲೇ ಮತದಾನದ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡಲಾಗಿದ್ದರೂ ಕೂಡಾ ಹಿರಿಯ ಅಜ್ಜಿ ಅದಕ್ಕೆ ಒಪ್ಪಿರಲಿಲ್ಲಾ ನಾನು ಇನ್ನೂ ಗಟ್ಟಿಯಾಗಿ ಇದ್ದೇನೆ ಮತದಾನದ ಕೇಂದ್ರಕ್ಕೆ ಹೋಗಿ ಮತದಾನ ಮಾಡುತ್ತೇನೆಂದು ಹೇಳಿದ್ದರೆಂದು ಕುಟುಂಬದ ಮೂಲಗಳು ಪತ್ರಿಕೆಗೆ ಮಾಹಿತಿ ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರಾದ ಸಿದ್ದನಗೌಡ ಅಂಗಡಗೇರಿ, ಬಸನಗೌಡ ಬಗಲಿ, ಬಸನಗೌಡ ಕುಂಟರೆಡ್ಡಿ, ಚಂದ್ರಶೇಖರ ಸಾಸನೂರ, ಚಂದ್ರಶೇಖರ ಕನಕರಡ್ಡಿ, ಮೊದಲಾದವರು ಇದ್ದರು.