ಶತಾಯುಷಿ ಧೂಳಯ್ಯ ಸ್ವಾಮಿ 4ದಿವಸದಿಂದ ಅನಿರ್ದಿಷ್ಟಾವಧಿ ಉಪವಾಸ

ಭಾಲ್ಕಿ : ಸೆ.1:ಪರಿಶಿಷ್ಟ ಜಾತಿ (ಎಸ್ಸಿ) ಪ್ರಮಾಣ ಪತ್ರಕ್ಕಾಗಿ ಬೇಡಜಂಗಮ
ಸಮುದಾಯ ನಡೆಸುತ್ತಿರುವ ಹೋರಾಟತೀವ್ರಗೊಂಡಿದೆ.
ಪಟ್ಟಣದ ತಹಸೀಲ್ ಕಚೇರಿಎದುರುತಾಲೂಕು ಬೇಡಜಂಗಮ
ಸಂವಿಧಾನ ಬದ್ಧ ಹಕ್ಕಿಗಾಗಿ ಸಮಾಜ ಸತ್ಯ ಪ್ರತಿಪಾದನಾ ಸತ್ಯಗ್ರಹ
ಹೆಸರಲ್ಲಿ ಕಳೆದ 57 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸಿ
ಕೊಂಡು ಬರಲಾಗುತ್ತಿದೆ.
ಇವರ ಹೋರಾಟಕ್ಕೆ ವಿವಿಧ ಸಂಘ, ಸಂಸ್ಥೆಗಳು ಬೆಂಬಲ ವ್ಯಕ್ತ
ಪಡಿಸಿವೆ. ಆದರೆಇದು ವರೆಗೂ ಸ್ಥಳೀಯ ರಾಜಕೀಯ ಮುಖಂಡರು,
ಜನಪ್ರತಿನಿಧಿಗಳು ಬೇಡಜಂಗಮರ ಹೋರಾಟದತ್ತ ಮುಖ ಮಾಡಿಲ್ಲ.
ಸರಕಾರಕೂಡ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡುತ್ತಿಲ್ಲ.
ಇದರಿಂದ ಬೇಡಜಂಗಮರ ತಾಳ್ಮೆಯ ಕಟ್ಟೆಒಡೆದಿದ್ದು,
ಹೋರಾಟದರೂಪ ಹಂತ ಹಂತವಾಗಿತೀವ್ರ ಸ್ವರೂಪ ಪಡೆದು
ಕೊಳ್ಳುತ್ತಿದೆ.
ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಶತಾಯಷಿ
ಸ್ವಾಮಿಯೊಬ್ಬರು ಅನಿರ್ದಿಷ್ಟಾವಧಿ ಉಪವಾಸಕ್ಕೆ ಮುಂದಾಗಿದ್ದಾರೆ.
ಪಟ್ಟಣದದೇಶಮುಖ ಬಡಾವಣೆಯ ನಿವಾಸಿ ಆಗಿರುವ ಧೂಳಯ್ಯ
ಚನ್ನಯ್ಯ ಸ್ವಾಮಿಎಂಬುವರು ಕಳೆದ ಎರಡು ದಿನಗಳಿಂದ ಅನ್ನ,
ನೀರುಇಲ್ಲದೇ ಉಪವಾಸ ಆರಂಭಿಸಿದ್ದಾರೆ.
ಬೇಡಜಂಗಮ ಸಮುದಾಯಕ್ಕೆ ನ್ಯಾಯ ಸಿಗುವ ವರೆಗೂ ಉಪವಾಸ
ಕೊಡುವುದಾಗಿ ಪಟ್ಟು ಹಿಡಿದಿದ್ದಾರೆ. ವಯಸ್ಸಾದ ಹಿನ್ನೆಲೆಯಲ್ಲಿ ಉಪವಾಸ
ಕೈಬಿಡುವಂತೆ ಮನವೊಲಿಸುವ ಪ್ರಯತ್ನ ನಡೆಯುತ್ತಿದ್ದರೂಕೂಡ
ಧೂಳಯ್ಯ ಸ್ವಾಮಿತಮ್ಮ ಪಟ್ಟು ಸಡಿಲಿಸುತ್ತಿಲ್ಲ.