ಹಿರಿಯೂರು : ಏ. .20-ಹಿರಿಯೂರಿನ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಾದ ಕೆ ತಿಮ್ಮಪ್ಪನವರು ಹಾಗೂ ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್ ರವರು ತಮ್ಮ ಸಿಬ್ಬಂದಿಯೊಂದಿಗೆ ಹಿರಿಯೂರು ವೇದಾವತಿ ನಗರದ ನಿವಾಸಿ 108 ವರ್ಷದ ಶ್ರೀಮತಿ ತಿಪ್ಪೀರಮ್ಮ ಹಾಗೂ ಹಿರಿಯೂರು ಸಿದ್ದನಾಯ್ಕ ವೃತ್ತದ ಬಳಿ ಇರುವ 102 ವರ್ಷದ ಶ್ರೀಮತಿ ಗುರುಸಿದ್ದಮ್ಮ ಇವರ ಮನೆಗಳಿಗೆ ಭೇಟಿ ನೀಡಿ ಸನ್ಮಾನಿಸಿ ಇವರನ್ನು ಮೇ ಹತ್ತರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಆಹ್ವಾನಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ಆರ್.ಐಸ್ವಾಮಿ, ಕಂದಾಯ ಅಧಿಕಾರಿ ಮಯವರ್ಮ, ಎಂ ಆರ್ ಗೋಪಿ, ಚಿಕ್ಕಳ್ಳಿ ಮತ್ತು ಸಿಬ್ಬಂದಿಯವರು ಇದ್ದರು.