ಶತಕದ ಸರದಾರ ಸಾಯಿಪ್ರಕಾಶ್

* ಚಿ.ಗೋ ರಮೇಶ್

ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಶತಕ ಬಾರಿಸಿ ಶತಕದ ಸರದಾರ ಆಗಿದ್ದಾರೆ.ತಾಯಿ, ಅಣ್ಣ ತಂಗಿ ಸೆಂಟಿಮೆಂಟ್ ಚಿತ್ರಗಳ ನಿರ್ದೇಶಕ ಎಂದೇ ಹೆಸರಾದ ನಿರ್ದೇಶಕರು ಈಗ ನೂರನೇ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಅದುವೇ ದೇವಮಾನವ  ಪುಟ್ಟಪರ್ತಿ ಸಾಯಿಬಾಬಾ  ಮಹಿಮೆಯ  ಕಥಾಹಂದರ , “ಶ್ರೀ ಸತ್ಯಸಾಯಿ ಅವತಾರ” ಚಿತ್ರ ನಿರ್ದೇಶಿಸುತ್ತಿದ್ದಾರೆ.    ಡಾ.ದಾಮೋದರ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಮಹರ್ಷಿ ಆನಂದ ಗುರೂಜಿ .ಟಿ.ಎ ಸರವಣ , ನಿರ್ಮಾಪಕ  ಡಾ.ದಾಮೋದರ್, ಹಿರಿಯಸಾಹಿತಿ ದೊಡ್ಡರಂಗೇಗೌಡರು, ಡಿಂಗ್ರಿ ನಾಗರಾಜ್, ಗಣೇಶರಾವ್ ಕೇಸರಕರ್ ಸೇರಿದಂತೆ ಹಲವು ಪಾಲ್ಗೊಂಡಿದ್ದರು. ಎಸ್.ಎಂ. ಕೃಷ್ಣ ಮಾತನಾಡಿ, ಸಾಯಿಪ್ರಕಾಶ್  ಶಿರಡಿ ಸಾಯಿಬಾಬಾ ಕುರಿತು ಸಿನಿಮಾ ಮಾಡುವ ಜೊತೆಗೆ  ಬಾಬಾನಾಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಪುಟ್ಟಪರ್ತಿ ಸಾಯಿಬಾಬಾ ಅವರ ಬಗ್ಗೆ ಚಿತ್ರ ಮಾಡಲು ಸಿದ್ದರಾಗಿದ್ದಾರೆ. ಅವರಿಗೆ ಸಾಯಿಬಾಬಾರ ಆಶೀರ್ವಾದ ವಿದೆ ಒಳ್ಳೆಯದಾಗಲಿ ಎಂದರು.

ಮಹರ್ಷಿ ಆನಂದ ಗುರೂಜಿ ಸತ್ಯ ಸಾಯಿಬಾಬಾ ಅವರು  ದೈವಾಂಶ ಸಂಭೂತರು. ಮುಖ್ಯಮಂತ್ರಿ ಮಾಡಿದ   ಜನಸೇವಾ ಕಾರ್ಯಗಳನ್ನು ಅವರು  ಮಾಡಿದ್ದಾರೆ. ಬಾಬಾ ಬೆಳೆದುಬಂದ ಹಾದಿಯನ್ನು ಬೆಳ್ಳಿ ತೆರೆಯ ಮೇಲೆ ತರಲು ಹೊರಟಿರುವ ಈ ನಿರ್ಮಾಪಕರಿಗೆ ಬಾಬಾನ ಆಶೀರ್ವಾದವಿದೆ ಎಂದರು.

ಹಿರಿಯ ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ಸಾಯಿಪ್ರಕಾಶ್ ಅವರಲ್ಲಿ ಒಳ್ಳೆಯ ಕವಿಯೂ ಇದ್ದಾರೆ. ಭಕ್ತಿ ಪ್ರದಾನ ಚಿತ್ರಗಳನ್ನು ತುಂಬಾ ಚೆನ್ನಾಗಿ ತೆಗೆಯುವ ಕಲೆ ಅವರಲ್ಲಿದೆ ಎಂದರು.  ಜೆಜಿ ಕೃಷ್ಣ ಚಿತ್ರಕ್ಕೆ ಛಾಯಾಗ್ರಹಣವಿದ್ದು ಗಣೇಶ್ ನಾರಾಯಣ್ ಸಂಗೀತ ಸಂಗೀತ,. ದೀಪು ಎಸ್. ಕುಮಾರ್ ಸಂಕಲನವಿದೆ. ಕಲಾವಿದರ ಆಯ್ಕೆಪ ಮುಗಿದ ನಂತರ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಚಿತ್ರ ತಂಡಕ್ಕಿದೆ.