(ಸಂಜೆವಾಣಿ ವಾರ್ತೆ)
ಔರಾದ್ :ಜೂ.12: ಔರಾದ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಗ್ರೇಡ್ 2 ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ಯೋಜನೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ನೀಡಲಾಗುತ್ತಿದ್ದು, 6 ವರ್ಷ ಮೇಲ್ಪಟ್ಟ ಮಕ್ಕಳು ಸೇರಿದಂತೆ ಮಹಿಳೆಯರು ಕರ್ನಾಟಕ ರಾಜ್ಯದ ಎಲ್ಲ ಕಡೆಗಳಿಗೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದರು.
ಬಸ್ ಘಟಕದ ವ್ಯವಸ್ಥಾಪಕ ಎಸ್.ಟಿ ರಾಠೋಡ್ ಮಾತನಾಡಿ, ರಾಜ್ಯದ ಮಹಿಳೆಯರು ಇಂದಿನಿಂದಲೇ ರಾಜ್ಯ ಸರ್ಕಾರ ನೀಡಿದ ಭಾವಚಿತ್ರ ಹೊಂದಿರುವ ರ???ಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್ ಸೇರಿದಂತೆ ಯಾವುದೇ ಗುರುತಿನ ಚೀಟಿ ಇದ್ದಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದರು.
ತಾಲೂಕು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕದ ಮಹಿಳಾ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು, ಮಹಿಳಾ ಪ್ರಯಾಣಿಕರಿಗೆ ಸಾಂಕೇತಿಕವಾಗಿ ಪಟ್ಟಣದಾದ್ಯಂತ ಬಸ್ ಸಂಚಾರ ಮಾಡಿಸಲಾಯಿತು.
ತಾಪಂ ಇಒ ಬೀರೆಂದ್ರಸಿಂಗ್ ಠಾಕೂರ್, ಆಡಳಿತಾಧಿಕಾರಿ, ಎ.ಎಸ್ ಬಿರಾದಾರ್, ಪಾರುಪತ್ತೆಗಾರ ಬೀರಪ್ಪ ಮೇತ್ರೆ, ಎಟಿಐ ಮೋಜಿಸ್, ಪಿಎ??? ಮಡಿವಾಳಪ್ಪ, ಚಂದ್ರಕಾಂತ ಹಿಪ್ಪಳಗಾವೆ, ಕಾಂಗ್ರೆಸ್‍ನ ಹಿರಿಯ ಮುಖಂಡ ರಾಮಣ್ಣ ವಡೆಯರ್, ಬಸವರಾಜ ದೇಶಮುಖ, ಶಿವರಾಜ ದೇಶಮುಖ, ಯುವ ಮುಖಂಡ ಸುಧಾಕರ ಕೊಳ್ಳುರ್, ಡಾ. ಫಯಾಜ ಅಲಿ, ಅಂಜಾರೆಡ್ಡಿ, ಚಂದ್ರಶೇಖರ ಪಾಟೀಲ್ ಸೇರಿದಂತೆ ಇನ್ನಿತರರಿದ್ದರು.