ಶಕ್ತಿ ಯೋಜನೆಗೆ ಚಾಲನೆ

ಚನ್ನಮ್ಮನ ಕಿತ್ತೂರ,ಜೂ12: ಸರ್ಕಾರದ ಮಹತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ಕಿತ್ತೂರ ಬಸ್ ನಿಲ್ದಾಣ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ಈ ಯೋಜನೆ ಜಾರಿಗೊಳಿಸುವುದರ ಮೂಲಕ ಮಹಿಳಾ ಸಬಲೀಕರಣದತ್ತ ಸರ್ಕಾರ ದಿಟ್ಟ ಹೆಚ್ಚೆ ಇರಿಸಿದೆ. ಸಾಮಾಜಿಕ, ಆರ್ಥಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶತಶತಮಾನಗಳಿಂದ ಅವಕಾಶ ವಂಚಿತರಾಗಿದ್ದ ಮಹಿಳೆಯರಿಗೆ ಈ ಮೂಲಕ ಶಕ್ತಿ ತುಂಬುವ ಮತ್ತು ಅವರ ಕನಸುಗಳಿಗೆ ಪ್ರೋತ್ಸಾಹಿಸುವ ಕೆಲಸ ಕಾಂಗ್ರೇಸ್ ಸರ್ಕಾರ ಮಾಡಿದೆ ಎಂದರು.
ಶಕ್ತಿಯಿಲ್ಲದ ಅಶಕ್ತ ಜನರಿಗೆ ಶಕ್ತಿ ತುಂಬಬೇಕು ಎನ್ನುವುದು ನಮ್ಮ ಸರ್ಕಾರದ ಗುರಿ. ಎಷ್ಟೋ ದಿನಗಳಿಂದ ಅವರ ಕನಸು ವಂಚಿತವಾಗಿತ್ತು. ಅದು ಇಂದು ಈಡೇರಿದೆ. ಅದಕ್ಕಾಗಿ ಇಂದು ಸರ್ಕಾರ ಮಹಿಳೆಯರ ಉಚಿತವಾಗಿ ಅವಕಾಶ ನೀಡುವುದರ ಮೂಲಕ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಿದೆಂದು ಹೇಳಿದರು.
ಈ 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಒಟ್ಟು 59 ಸಾವಿರ ಕೋಟಿ ರೂ.ಗಳ ಅಗತ್ಯವಿದ್ದು ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಹೆಣ್ಣು ಮಕ್ಕಳು ಈ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು. ಕೇವಲ 3 ತಿಂಗಳಲ್ಲಿಯೇ ಪ್ರತಿ ಮಹಿಳೆಗೆ ಬಸ್ ಪಾಸ್ ಸ್ಮಾರ್ಟಕಾರ್ಡ ಮಾಡಿಕೊಡಲಾಗುವುದು. ಈ ಯೋಜನೆ ಮಹಿಳಾ ವಿದ್ಯಾರ್ಥಿನಿಯರಿಗೂ ಅನ್ವಯಿಸುತ್ತದೆ. ಇದಕ್ಕೆ ಮಧ್ಯವರ್ತಿಗಳಿಲ್ಲ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತದೆ. ಬಸ್ಸಿನಲ್ಲಿ ಪ್ರಯಾಣಿಸುವಾಗ ಸ್ಮಾರ್ಟ ಕಾರ್ಡ ಸಿಗುವರೆಗೂ ಆಧಾರ ಕಾರ್ಡ, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್ ತೋರಿಸಿ ಪ್ರಯಾಣಿಸಬಹುದು ಎಂದರು.
ಅತಿಥಿಯಾಗಿ ಆಗಮಿಸಿ ಪ್ರಾಸ್ತಾವಿಕ ನುಡಿಯನ್ನಾಡಿದ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಕೊಟ್ಟ ಮಾತು ಉಳಿಸಿಕೊಂಡಿದ್ದು ಯಾವುದಾದರೂ ಸರ್ಕಾರವೆಂದರೆ ಅದು ಕಾಂಗ್ರೇಸ್ ಸರ್ಕಾರ ಇದು ದೇಶಕ್ಕೆ ಮಾದರಿಯಾಗಿದೆ. ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ತಿಂಗಳೊಳಗಾಗಿ ಪ್ರಥಮವಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇದೊಂದು ಮಹತ್ವದ ಯೋಜನೆಯಾಗಿದ್ದು. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ತಹಶೀಲ್ದಾರ ರವೀಂದ್ರ ಹಾದಿಮನಿ ಮಾತ್ನಾಡಿ ಸರ್ಕಾರದ ಈ 5 ಯೋಜನೆಗಳು ದುರ್ಬಳಕೆಯಾಗದೇ ಸದ್ಬಳಕೆಯಾಗಬೇಕು. ಈ ಉಚಿತ ಬಸ್ ಪ್ರಯಾಣದÀ ಸದುಪಯೋಗ ಮಹಿಳೆಯರು ಪಡೆದುಕೊಂಡು ಇದು ಸತ್ಕಾರ್ಯಕ್ಕೆ ಬಳಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಸಾರಿಗೆ ಇಲಾಖೆ ಅಧಿಕಾರಿ ಡಿ.ರಾಧಾಕೃಷ್ಣಾ, ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ, ಸಿಪಿಐ ಮಹಾಂತೇಶ ಹೊಸಪೇಟ, ಪಿಎಸ್‍ಐ ರಾಜು ಮಮದಾಪೂರ, ಮುಖಂಡರುಗಳಾದ ಹನೀಪ್ ಸುತ್ತಗಟ್ಟಿ, ಶಂಕರ ಹೊಳಿ, ಭೀಷ್ಟಪ್ಪ ಶಿಂದೆ, ಸಂಗನಗೌಡ ಪಾಟೀಲ, ಅನಿಲ್ ಎಮ್ಮಿ, ಎಮ್, ಎಫ್, ಜಕಾತಿ, ಅಶಪಾಕ ಹವಾಲ್ದಾರ, ಸುನೀಲ ಗಿವಾರಿ, ಬಸವರಾಜ ಸಂಗೋಳ್ಳಿ, ಮುದಕಪ್ಪ ಮರಡಿ, ರಮೇಶ ಮೊಕಾಶಿ, ಚಂದ್ರಗೌಡ ಪಾಟೀಲ, ಶಿವನಸಿಂಗ ಮೊಕಾಶಿ, ಕೃಷ್ಣಾ ಬಾಳೇಕುಂದ್ರಿ ಸೇರಿದಂತೆ ಹಲವರಿದ್ದರು.