ಗುರುಮಠಕಲ್:ಜೂ.12:ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ನಿಗಮಗಳ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ನೀಡುವ ಸಂಬಂಧ ದಿನಾಂಕ 11-06-2023 ರಿಂದ ಜಾರಿಗೆ ಬರುವಂತೆ ಶಕ್ತಿ ಯೋಜನೆ ಅನುಷ್ಠಾನ ಗೊಳಿಸಲು ಅನುಮೋದನೆ ನೀಡಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದ ಆವರಣದಲ್ಲಿ ಆಯೋಜಿಸಲಾಗಿದ್ದ ಶಕ್ತಿ ಯೋಜನೆಯ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಸನ್ಮಾನ್ಯೆ ಶಾಸಕರು ಈ ಯೋಜನೆಯ ಉದ್ದೇಶ ಹೆಣ್ಣು ಮಕ್ಕಳಿಗೆ ಬಹಳಷ್ಟು ಅನುಕೂಲವಿದೆ ವಿಶೇಷವಾಗಿ ಗ್ರಾಮೀಣ ಪ್ರದೇಶದಿಂದ ಬರುವಂತಹ ತಾಯಂದಿಯರಿಗೆ ಬಸುಗಳ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು. ಈ ಯೊಂದು ಯೋಜನೆ ಸಂಪೂರ್ಣ ವಾಗಿ ಸರ್ಕಾರವು ಅವಧಿ ಮುಗಿಯುವ ವರೆಗೆ ಮುನ್ನಡಿಸಿ ಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು. ನಿಗಮದ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಳಿಗಾಗಿ ಪೆÇೀಟೋ ಮತ್ತು ರಾಜ್ಯದ ವಾಸಸ್ಥಳ ನಮೂದಿಸಿರುವ ಆಧಾರ್ ಕಾರ್ಡ್. ಮತದಾರರ ಗುರುತಿನ ಚೀಟಿ. ಚಾಲನಾ ಪರವಾನಗಿ ಪತ್ರ. ಕರ್ನಾಟಕ ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸುವ ಗುರುತಿನ ಚೀಟಿ ಯಾವುದಾದರೂ ಒಂದು ತಾವು ಬಸ್ ನಲ್ಲಿ ಪ್ರಯಾಣಿಸುತ್ತಿರು ವೇಳೆ ತೋರಿಸಿ ರಾಜ್ಯದ ಎಲ್ಲ ಮಹಿಳಾ ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಕಡ್ಡಾಯವಾಗಿ ಶೂನ್ಯ ಮೊತ್ತದ ಉಚಿತ ಟಿಕೆಟ್ ಪಡೆಯಬೇಕಾಗುತ್ತದೆ ಮಹಿಳಾ ಪ್ರಯಾಣಿಕರು ಒಂದು ವೇಳೆ ನಾವು ಹಣ ಕೊಟ್ಟು ಟಿಕೆಟ್ ಪಡೆದು ಪ್ರಯಾಣಿಸುತ್ತೆವೆ ಅನ್ನುವ ಉದಾರ ಮನೋಭಾವ ವಿದ್ದ ಮಾತೆಯರು ಟಿಕೇಟು ಪಡೆದುಕೊಂಡು ತಾವು ಬಸ್ ಗಳಲ್ಲಿ ಪ್ರಯಾಣಿಸ ಬಹುದು ಎಂದು ತಿಳಿಸಿದರು. ಈ ಯೋಜನೆಯಡಿಯಲ್ಲಿ 6 – 12 ವರ್ಷದ ಬಾಲಕಿಯರು. ಲಿಂಗತ್ವ ಅಲ್ಪಸಂಖ್ಯಾತರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ. ನಿಗಮದ ನಗರ ಸಾರಿಗೆ. ಸಾಮಾನ್ಯ ವೆಗ ದೂತ ಸಾರಿಗೆ ಗಳಲ್ಲಿ ಮಾತ್ರ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ರಾಜ್ಯದೊಳಗೆ ಯಾವುದೇ ಮಿತಿ ಇರುವುದಿಲ್ಲ ಎಂದು ಹೇಳಿದರು. ಘಟಕದ ವೆವಸ್ಥಾಪಕರು ಪ್ರವೀಣ ಯರನಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ವೇಳೆ ತಹಸಿಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಮೊಹಮ್ಮದ್ ಮೊಹಸೀನ್. ವೃತ್ತ ನಿರೀಕ್ಷಕರು ಪೆÇೀಲಿಸ್ ಇಲಾಖೆ ಎನ್.ಕೆ. ದೌಲತ್.ನೌಕರರ ಸಂಘದ ಅಧ್ಯಕ್ಷ ರಾದ ಶ್ರೀ ಸಂತೋಷ್ ಕುಮಾರ ನಿರೇಟಿ. ವೆವಸ್ಥಾಪಕರು ಪುರಸಭೆ ಮಲ್ಲಿಕಾರ್ಜುನ. ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಶರಣಪ್ಪ .ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರು ಶರಣಮ್ಮ. ವೈದ್ಯಾಧಿಕಾರಿ ಶಿವಪ್ರಸಾದ್ ಮೈತ್ರಿ. ಘಟಕದ ಮೇಲುಸ್ತುವಾರಿ ಲೆಕ್ಕಾಧಿಕಾರಿ ಯಾದಗಿರಿ ವಿಭಾಗ ಪಂಪನಗೌಡ ಸ್ವಾಗತ ನೀಡಿದರು. ಶಾಲಾ ಮಕ್ಕಳು ನಾಡಗೀತೆ ಮತ್ತು ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಗುರುಮಠಕಲ ಘಟಕ ಯಾದಗಿರಿ ವಿಭಾಗ ಆಡಳಿತ ಮತ್ತು ಸಿಬ್ಬಂದಿ ವರ್ಗ ದವರು ಹಾಗೂ ಸಾರ್ವಜನಿಕರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದರು.