ಶಹಾಪುರ :ಜೂ.12: ಮಹಿಳೆಯರಿಗೆ ಶಕ್ತಿ ಯೋಜನ ಮೂಲಕ ಸರ್ಕಾರಿ ಬಸ್‍ಗಳಲ್ಲಿ ರಾಜ್ಯದಾದ್ಯಂತ ಪ್ರಯಾಣಕ್ಕೆ ಅನುಕೂಲ ಮಾಡಿ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ ಎಂದು ಹೆಗ್ಗನದೊಡ್ಡಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀ ಸೋಮವ್ವ ದೇವಣ್ಣ ದೊರೆ ಹೇಳಿದರು
ಗ್ರಾಮಪಂಚಾಯಿತಿ ಕೇಂದ್ರವಾಜ ಹೆಗ್ಗನದೊಡ್ಡಿಲ್ಲಿ ಸೋಮವಾರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ರಾಜ್ಯದ ಗಡಿಯ ಪಟ್ಟಣ ಹಾಗೂ ಗ್ರಾಮಗಳವರೆಗೆ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣಕ್ಕೆ ಇಂದು ಚಾಲನೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಜಾರಿಯಾಗಿರುವ ಮೊದಲ ಯೋಜನೆ ಇದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಶಕ್ತಿ ಯೋಜನೆಗೆ ಅದ್ಧೂರಿಯಾಗಿ ರವಿವಾರ ಚಾಲನೆ ನೀಡಿದರು
ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ತರುವ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡಿದೆ. ಜಿಲ್ಲೆಯಲ್ಲಿ ಸುಮಾರು ಏಳು ಲಕ್ಷ ಮಹಿಳೆಯರು, ಈವರೆಗೆ ಪ್ರಯಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಯೋಜನೆ ಜಾರಿಯಿಂದ ಎಲ್ಲ ಮಹಿಳೆಯರು ಹೆಚ್ಚಿನ ಲಾಭ ಪಡೆಯಬಹುದಾಗಿದ್ದು, ಸರ್ಕಾರ ಮಹಿಳೆಯರ ಆರ್ಥಿಕ ಭಾರ ಇಳಿಸುವ ಮಹತ್ತದ ಕಾರ್ಯ ಮಾಡಿದೆ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀ ಸೋಮವ್ವ ದೇವಣ್ಣ ದೊರೆ ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಮಣ್ಣ ಅಡೆಮನಿ ಮಾತನಾಡಿ, ಮಹಿಳೆಯರು ಮುಂಬ ರುವ ದಿನಗಳಲ್ಲಿ ಅರ್ಜಿಯನ್ನು ಪಡೆದು ‘ಶಕ್ತಿ’ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವಂತೆ ತಿಳಿಸಿದ ಅವರು, ಮಹತ್ವಾಕಾಂಕ್ಷಿ ಯೋಜನೆಯನ್ನು
ಮಹಿಳೆಯರು ಮೂರು ತಿಂಗಳ ಅವಧಿಯಲ್ಲಿ
‘ಶಕ್ತಿ’ ಸ್ಟಾರ್ಟ್ ಕಾರ್ಡ್ ಪಡೆದು ಸರ್ಕಾರಿ ಬಸ್ ಗಳಲ್ಲಿ ಸಂಚಾರ ಮಾಡಬೇಕು. ಈ ಅವಧಿಯಲ್ಲಿ ಸಧ್ಯ ಗುರುತಿಗಾಗಿ ಆಧಾರ್, ಮತದಾನ ಗುರುತಿನ ಚೀಟಿ, ಚಾಲನ ಪರವಾನಿಗೆ ಪತ್ರ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡೆದ ಯಾವುದಾದರೂ ಭಾವಚಿತ್ರವುಳ್ಳ ಗುರುತಿನ ಚೀಟಿ ತೋರಿಸಿ ಪ್ರಯಾಣದ ‘ಶೂನ್ಯ’ ಟಿಕೆಟ್ ಪಡೆದು ಬಸ್ ಸಂಚಾರ ಮಾಡಬಹುದು.
ಮಹತ್ವಕಾಂಕ್ಷೆಯ ಯೋಜನೆಗಳನ್ನು ರೂಪಿಸುವ ಮೂಲಕ ಜನತೆಗೆ ನೀಡಿದ ಭರವಸೆ ಈಡೇರಿಸಿದೆ ಎಂದು ಹೇಳಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಧರ್ಮಿಭಾಯಿ ಮಾತನಾಡಿ, ರಾಜ್ಯ ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದ ಮಹಿಳೆಯರು, ವಿದ್ಯಾರ್ಥಿ ನಿಯರು ಲಿಂಗತ್ವ ಅಲ್ಪಸಂಖ್ಯಾತರು ಸಹ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ, ಸಾಮಾನ್ಯ ವೇಗದೂತ ಮತ್ತು ಸಾರಿಗೆಗಳಲ್ಲಿ ಮಾತ್ರ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು. ಅವಕಾಶ
ನೀಡಲಾಗಿರುತ್ತದೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಶ್ರೀ ದೇವಣ್ಣ ದೊರೆ , ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಸಿದ್ದಯ್ಯ ಗುತ್ತೇದಾರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಧರ್ಮಿಭಾಯಿ ರಾಠೋಡ,ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಲಾಳೆಪಟೇಲ್ ಅಂಗಡಿ, ರಾಮಣ್ಣ ಅಡೆಮನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಮಾಳಪ್ಪ ಪೂಜಾರಿ ಗೋಡ್ರಿಹಾಳ, ಗುರುಲಿಂಗಪ್ಪ ಅಂಗಡಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಮಾಳಪ್ಪ ಪೂಜಾರಿ,ಬಸಣ್ಣ ಗಗ್ಗರಿ, ಸಂಗಮೇಶ ಕೋಳೂರು, ಮಕ್ಬೂಲ್ ಪಟೇಲ್ ನಂದಪ್ಪ ಹೊಸಗೌಡ್ರ, ಗ್ರಾಮ ಹಲವಾರು ಯುವಕರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು