ಶಕ್ತಿ ಅಕ್ಯುಲೇಟರ್ ಕಂಪನಿ ಮಾಲೀಕರಿಂದ ದೂರು

ಕನಕಪುರ, ಜ.೧೦-ಅಗ್ನಿದುರಂತದಿಂದ ಪ್ಯಾಕ್ಟರಿ ಸಂಪೂರ್ಣ ಸುಟ್ಟು ನಾಶವಾಗಿದ್ದು ಸುಮಾರು ೩೩ ಕೋಟಿ ನಷ್ಟವಾಗಿರುವುದಾಗಿ ಶಕ್ತಿ ಅಕ್ಯುಲೇಟರ್ ಪ್ರವೇಟ್ ಲಿಮಿಟೆಡ್ ಮಾಲಿಕ ನಾಗರಾಜು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಾಲ್ಲೂಕಿನ ಹಾರೋಹಳ್ಳಿಕೈಗಾರಿಕಾ ಪ್ರದೇಶದ ೨ನೇ ಹಂತದ ಹುಳುಗೊಂಡನಹಳ್ಳಿ ಗ್ರಾಮದ ಸಮೀಪದಲ್ಲಿ ಬರುವ ಶಕ್ತಿ ಅಕ್ಯುಲೇಟರ್ ಪ್ರವೇಟ್ ಲಿಮಿಟೆಡ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿ ಕೊಂಡಿತ್ತು. ಈ ವೇಳೆ ಕೆಲಸ ಮಾಡುತ್ತಿದ್ದ ನೌಕರರು ಹೊರಬಂದು ಅಪಾಯದಿಂದ ಪಾರಾಗಿದ್ದರು.
ಆದರೆ ಪ್ಯಾಕ್ಟರಿಯಲ್ಲಿ ಅತಿಯಾದ ಬೆಂಕಿ ಜ್ವಾಲೆಯಿದ್ದುದರಿಂದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರುಪ್ರಯಾಸ ಪಡಬೇಕಾಯಿತು. ರಾತ್ರಿ ೧೨ ಗಂಟೆವರೆಗೂ ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಅಗ್ನಿ ದುರಂತದಲ್ಲಿ ಪ್ಯಾಕ್ಟರಿ ಸಂಪೂರ್ಣ ಸುಟ್ಟಿರುವುದರಿಂದ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು ೯೦ ಮಂದಿ ನೌಕರರು ತಮ್ಮ ಕೆಲಸವನ್ನು ಕಳೆದುಕೊಂಡು ಬುಧವಾರದಿಂದ ನಿರುದ್ಯೋಗಿಗಳಾಗಿದ್ದಾರೆ.
ಯು ಪಿ ಎಸ್ ತಯಾರಿಕಾ ಪ್ಯಾಕ್ಟರಿಯಾಗಿದ್ದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿದ ಬೆಂಕಿ ಕಿಡಿಗೆ ಕ್ಷಣಾರ್ಧದಲ್ಲಿ ಪ್ಯಾಕ್ಟರಿ ಸುಟ್ಟು ಭಸ್ಮವಾಯಿತು. ಮಾಲಿಕ ನಾಗರಾಜು ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹಾರೋಹಳ್ಳಿ ಪೊಲೀಸರು ಅಗ್ನಿ ದುರಂತದ ಪ್ರಕರಣ ದಾಖಲಿಸಿಕೊಂಡಿದ್ದಾರೆ.