ಶಕ್ತಿಪೀಠ ಫೌಂಡೇಷನ್ ಮೌಲ್ಯಮಾಪನ ವರದಿ ಸಿಎಂಗೆ ಸಲ್ಲಿಸಲು ನಿರ್ಣಯ

ತುಮಕೂರು, ಜು. ೧೦- ನಗರದ ಶಕ್ತಿಪೀಠ ಫೌಂಡೇಷನ್ ಕಚೇರಿಯಲ್ಲಿ ನಡೆದ ೬ನೇ ಜನಜಾಗೃತಿ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಶಕ್ತಿಪೀಠ ಫೌಂಡೇಷನ್ ಪ್ರಾಯೋಗಿಕವಾಗಿ ಸಿದ್ಧಪಡಿಸುತ್ತಿರುವ ಮೌಲ್ಯ ಮಾಪನ ವರದಿಗಳನ್ನು ೭೫ ಜನಜಾಗೃತಿ ಸಭೆ ಆಯೋಜಿಸುವ ಸಂಘ ಸಂಸ್ಥೆಗಳ, ಕುಟುಂಬಗಳ ಮತ್ತು ವ್ಯಕ್ತಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿಯವರಿಗೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ಫೌಂಡೇಷನ್ ಪ್ರಾಯೋಗಿಕವಾಗಿ ಸಿದ್ಧಪಡಿಸುತ್ತಿರುವ ಮೌಲ್ಯಮಾಪನ ವರದಿಗಳನ್ನು ೭೫ ಜನಜಾಗೃತಿ ಸಭೆ ಆಯೋಜಿಸುವ ಸಂಘ ಸಂಸ್ಥೆಗಳ, ಕುಟುಂಬಗಳ ಮತ್ತು ವ್ಯಕ್ತಿಗಳ ನೇತೃತ್ವದಲ್ಲಿ ಪ್ರಧಾನ ಮಂತ್ರಿಯವರಿಗೆ ಸಲ್ಲಿಸಲು ನಿರ್ಣಯ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರು ಬೆಂಗಳೂರನ್ನು ಐಟಿ-ಬಿಟಿ ಕೇಂದ್ರವನ್ನಾಗಿ ಮಾಡಿ, ವಿಶ್ವದ ಗಮನವನ್ನು ಬೆಂಗಳೂರಿನ ಕಡೆಗೆ ಸೆಳೆಯಲು ಕಾರಣೀಭೂತರಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದಾಯ ಹೆಚ್ಚಳದ ’ಐಟಿ-ಬಿಟಿ ಜನಕ’ರಾಗಿದ್ದಾರೆ. ಪಶ್ಚಿಮಾಭಿಮುಖವಾಗಿ ನೀರು ತರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಯೋಜನೆಗೆ ಚಾಲನೆ ನೀಡಿದ ಒಂದು ಶಕ್ತಿಯಾಗಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುವ ಮಹತ್ವದ ತೀರ್ಮಾನ ಮಾಡಲಾಯಿತು.
ಲೋಕಸಭಾ ಸದಸ್ಯರಾದ ಜಿ.ಎಸ್. ಬಸವರಾಜು ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯರವರ ಜ್ಞಾನದಧಾರೆಯಿಂದ ರಾಜ್ಯಜಲಗ್ರಂಥ’ ಸಿದ್ಧಪಡಿಸಲು ಒಂದು ಶಕ್ತಿಯಾಗಿದೆ. ಕಳೆದ ೪೦ ವರ್ಷಗಳಿಂದಲೂ ನೀರಾವರಿ ಯೋಜನೆಗಳಿಗಾಗಿ ನಿರಂತವಾಗಿ ’ಜ ಋಷಿ’ ಗಳಂತೆ ಶ್ರಮಿಸಿರುವ ಮತ್ತು ಶ್ರಮಿಸುತ್ತಿರುವ ಅವರಿಬ್ಬರಿಗೆ ಅಭಿನಂದನೆ ಸಲ್ಲಿಸುವ ಮಹತ್ವದ ನಿರ್ಣಯವನ್ನು ಸಭೆ ಕೈಗೊಂಡಿತು.
ನಗರದಲ್ಲಿ ಇವೆ ಎನ್ನಲಾದ ಸುಮಾರು ೯೩೯ ಉಧ್ಯಾನವನಗಳ ಹುಡುಕಾಟ ಮಾಡಿ, ೩ ನೇ ಹಂತದ ಹಸಿರು ತುಮಕೂರು ಯೋಜನೆಗೆ ಜನಜಾಗೃತಿ ಮೂಡಿಸಲು ತುಮಕೂರಿನ ಪ್ರೆಸ್‌ಕ್ಲಬ್ ಮುಂದೆ ಬಂದಿದೆ. ಶೀಘ್ರದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು. ಜಿಲ್ಲೆಯ ೧೧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇವೆ ಎನ್ನಲಾದ ’೪೩೬೫ ಜಲ ಸಂಗ್ರಹಾಗಾರಗಳ ಹುಡುಕಾಟದ ಜನಜಾಗೃತಿ ಮೂಡಿಸಲು ತುಮಕೂರಿನ ಪ್ರಗತಿಟಿವಿ ಮತ್ತು ಪ್ರಜಾಪ್ರಗತಿ ದಿನ ಪತ್ರಿಕೆ’ ಮುಂದೆ ಬಂದಿದೆ. ಶೀಘ್ರದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು
ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಯೋಜನೆಗಳ ಜಾರಿಗಾಗಿ ’ರಾಜ್ಯಾದ್ಯಂತ ಮಠಾಧಿಪತಿಗಳು, ವಿವಿಧ ವರ್ಗದ ಧಾರ್ಮಿಕ ಮುಖಂಡರ ಸೇವೆ ಬಳಸಿಕೊಳ್ಳಲು ರೂಪುರೇಷೆ ನಿರ್ಧರಿಸಲು ನಿರ್ಣಯಿಸಲಾಯಿತು.
ಸಭೆಯಲ್ಲಿ ರಮೇಶ್, ಪತ್ರಕರ್ತರಾದ ಎಸ್. ನಾಗಣ್ಣ, ಅದಲಗೆರೆ ನಾಗೇಂದ್ರ ಪಾಲ್ಗೊಂಡಿದ್ದರು.