ಶಕುಂತಲಾ ಬೆಲ್ದಾಳೆಯಿಂದ ಆಹಾರ ಸಾಮಗ್ರಿ ವಿತರಣೆ

ಬೀದರ:ಜೂ.3: ಬೀದರ್ ದಕ್ಷಿಣ ಕ್ಷೇತ್ರದ ಚಿಟ್ಟಾ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಶಕುಂತಲಾ ಕೆ ಬೆಲ್ದಾಳೆ ಅವರು ಸಾರ್ವಜನಿಕರಿಗೆ ಆಹಾರ ದಿನಸಿ ಸಾಮಾನುಗಳ ಕಿಟ್ ಗಳನ್ನು ವಿತರಿಸಿದರು.

ಎಲ್ಲರೂ ಜಾಗೃತಿ ವಹಿಸಿ ಸರ್ಕಾರ ಮಾರ್ಗಸೂಚಿ ತಪ್ಪದೇ ಪಾಲಿಸುವಂತೆ ಸಲಹೆ ನೀಡಿದರು. ಅಲ್ಲದೇ ಅನಾವಶ್ಯಕವಾಗಿ ರಸ್ತೆಯಲ್ಲಿ ಸಾರ್ವಜನಿಕರು ಒಡಾಡಬಾರದು ಆದಷ್ಟು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸಂಪೂರ್ಣ ಕೊರೋನಾ ನಿಯಂತ್ರಣಕ್ಕೆ ಸಹಕರಿಸೋಣ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು

ಈ ಸಂದರ್ಭದಲ್ಲಿ ಶಿವರಾಜ್, ಶಿವು ಚೌದರಿ, ಶಿವಾಜಿ ರಾವ್ ಪಾಟೀಲ್,ಅಣ್ಣೆಪ್ಪಾ ಪಾಟೀಲ್ ,ಆನಂದ ,ವೆಂಕಟ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು