ಶಂಕರ ಮಠಕ್ಕೆ ಕಾಂಕ್ರೀಟ್ ರಸ್ತೆ

ಬಳ್ಳಾರಿ ಜೂ 05 : ನಗರದ ಹೊರ ವಲಯದ ಸಂಗನಕಲ್ಲು ರಸ್ತೆಯಲ್ಲಿರುವ ಶೃಂಗೇರಿ ಶಾರದಾ ಶಂಕರ ಮಠಕ್ಕೆ
ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ 10 ಲಕ್ಷ ರೂಗಳ‌ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಇಂದು‌ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಾಲಿಕೆ ಸದಸ್ಯ ಎಸ್.ಮಲ್ಲನಗೌಡ, ಮುಖಂಡರಾದ ಬಿ. ಕೆ. ಬಿ. ಎನ್. ಮೂರ್ತಿ, ವಿ. ಮುರಳಿ, ಜೆ. ಮೋಹನ ಶಾಸ್ತ್ರಿ, ರಘುನಂದನ್, ಮುರಾರಿ, ರೂಪನಗುಡಿ ಶ್ರೀಧರ್, ಇಂಜಿನಿಯರ್ ರಾಮ್ ಮೋಹನ್ ದೇಸಾಯಿ, ಹಿರಿಯ ವಕೀಲ ರಂಗನಾಥ, ಸತ್ಯಮೂರ್ತಿ, ಡಾ॥ಸುಂದರ್ , ಡಾ॥ ಸುಧಾಕರ್‌ ಮೊದಲಾದವರು ಉಪಸ್ಥಿತರಿದ್ದು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಠದ ಆವರಣ ಮತ್ತು ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟರು.