ಶಂಕರ್ ನಾಗ್ ‘ಎಲ್ಲರ ಹೀರೋ’ : ಸುದೀಪ್

ಬೆಂಗಳೂರು, ನ 09 – ದೇಶ ಕಂಡ ಅತ್ಯುತ್ತಮ ನಟ ಶಂಕರ್ ನಾಗ್ ಜನ್ಮದ ಪ್ರಯುಕ್ತ ಸ್ಯಾಂಡಲ್ ವುಡ್ ನಟ, ನಟಿಯರು ಹಾಗೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ಮರಿಸಿದ್ದಾರೆ.

ಸರಳತೆ, ಶಿಸ್ತು, ಬಿಡುವಿಲ್ಲದಂತೆ ಕೆಲಸದಲ್ಲಿ ತೊಡಗಿಸಿಕೊಳ್ಳುವಿಕೆ, ಪಾದರಸದಂತಹ ಚಟುವಟಿಕೆಗೆ ಹೆಸರಾದ ಶಂಕರ್ ನಾಗ್ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದು, ಎಲ್ಲ ನಟ, ನಟಿಯರಿಗೂ ಮಾದರಿಯಾಗಿದ್ದಾರೆ. ಖ್ಯಾತ ನಟ ಕಿಚ್ಚ ಸುದೀಪ್, “ಶಂಕರ್ ನಾಗ್ ಎಲ್ಲರ ಹೀರೋ” ಎಂದು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ನವರಸ ನಾಯಕ ಜಗ್ಗೇಶ್, ಹಲವರು ಸತ್ತ ಮೂರು ದಿನಕ್ಕೆ ಮರೆವು..!! ಕೆಲವರು ಸತ್ತ ನೂರುವರ್ಷಕ್ಕು ನೆನಪು..!! ಎಲ್ಲರಿಗು ಇವರು ನಟ ನನಗೆ ಆತ್ಮೀಯ..!! ಇವರ ತಮ್ಮನ ಪಾತ್ರ ಮಾಡಿದ ಹೆಮ್ಮೆಯಿದೆ..!! ಮಾಸದೆ ಮಾನಸದಲ್ಲಿ ಇವರ ಒಡನಾಟದ ನೆನಪು ಉಳಿದಿದೆ..!! ಮಹನೀಯರ ಹುಟ್ಟುಹಬ್ಬದ ಶುಭಕಾಮನೆ………” ಎಂದಿದ್ದಾರೆ.

ನಟ ದರ್ಶನ್ ಟ್ವೀಟ್ ಮಾಡಿ, ನಿಜವಾದ ಹೀರೋಗೆ ಎಂದಿಗೂ ಸಾವಿಲ್ಲ. ಅಂತೆಯೇ ನಟ ಶಂಕರ್ ನಾಗ್ ಅವರು ಜನರ ಹೃದಯಲ್ಲಿ ಎಂದೆಂದೂ ನೆಲೆಸಿರುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ನಟ ಧ್ರುವ ಸರ್ಜಾ ಟ್ವೀಟ್ ಮಾಡಿದ್ದು, , “ಕರಾಟೆ ಕಿಂಗ್ ಶಂಕ್ರಣ್ಣನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಜೈ ಆಂಜನೇಯ” ಎಂದು ಹೇಳಿದ್ದಾರೆ.