ಶಂಕರಾಚಾರ್ಯರ ಜಯಂತಿ- ಸಾಮೂಹಿಕ ವಿವಾಹ

ಸಿರವಾರ.ಏಂ೬- ವಿವಿಧ ಮಠಗಳು ಆಯೋಜನೆ ಮಾಡುವ ಸಾಮೂಹಿಕ ವಿವಾಹಗಳಲ್ಲಿ ಕೇವಲ ಬಡವರು ಮಾತ್ರ ವಿವಾಹವಾಗುವುದು ಸಾಮಾನ್ಯ, ಆದರೆ ಆರ್ಥಿಕ ಸ್ಥಿತಿವಂತರು ವಿವಾಹವಾದರೆ ಮತ್ತೊಬ್ಬರಿಗೆ ಪ್ರೇರಣೆಯಾಗುತ್ತದೆ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ತಾಲ್ಲೂಕಿನ ಕಲ್ಲೂರು ಗ್ರಾಮದ ಶ್ರೀ ದತ್ತಾತ್ರೇಯ ಅವದೂತ ಪೀಠ ಜಗದ್ಗುರು ಶ್ರೀ ಶಂಕರಾಚಾರ್ಯರ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು ಸಾಮೂಹಿಕ ವಿವಾಹ ಮಾಡುವುದರಿಂದ ಬಡವರಿಗೆ ತುಂಬಾ ಅನುಕೂಲವಾಗಲಿದೆ, ಒಂದು ಸಾಕು ಎರಡು ಬೇಕು ಎಂಬ ಸರ್ಕಾರ ಆದೇಶ ಪ್ರತಿಯೊಬ್ಬರು ಪಾಲನೆ ಮಾಡಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ,ಮನೆಯಿಂದಲೇ ಸಂಸ್ಕಾರ ಕಲಿಸಬೇಕು. ಸಂಸ್ಕಾರ ಇದರೇ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು.
ಜಿ.ಪಂ ಮಾಜಿ ಸದಸ್ಯ ಬಷೀರುದ್ದಿನ್, ಜಂಬುನಾಥ ಯಾದವ್, ತಾ.ಪಂ ಮಾಜಿ ಸದಸ್ಯ ಫಕೀರಪ್ಪ, ಇದೆ ಸಂದರ್ಭದಲ್ಲಿ ಪರಮಪೂಜ್ಯರು ಕಲ್ಲೂರು ಗ್ರಾಮದ ಎಲ್ಲಾ ಸಮಾಜದ ಮುಖಂಡರು ಸುತ್ತ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು