ಶಂಕರಾಚಾರ್ಯರ ಜಯಂತಿ: ಉಪನ್ಯಾಸ


ಸತ್ತೂರು,ಮೇ.13: ಅಲ್ಪಾಯುಷ್ಯದ ಬದುಕಿನಲ್ಲಿ ಅಗಾಧವನ್ನು ಸಾಧಿಸಿದ ಮಹತ್ತಿನ ಸತ್ಯದರ್ಶನ. ಆಯುಷ್ಯ ಮುಖ್ಯವಲ್ಲ, ಮನಸ್ಸು ಮುಖ್ಯವೆಂದು ತೋರಿಸಿದ ದಿಟ್ಟ ದರ್ಶನ. ನರ್ಮದಾ ನದಿ ತೀರದಲ್ಲಿ , ಶ್ರೀ ಗೋವಿಂದ ಭಗತ್ಪಾದರನ್ನು ಗುರುಗಳಾಗಿ ಸ್ವೀಕರಿಸಿ , ಆಚಾರ್ಯ ಶಂಕರರು , ತಮ್ಮ ಐದನೇ ವಯಸ್ಸಿನಲ್ಲಿ ಉಪನೀತರಾಗಿ, ಎಂಟನೇ ವಯಸ್ಸಿನಲ್ಲಿ ನಾಲ್ಕು ವೇದಗಳನ್ನು ಅರ್ಥ ಸಹಿತ ಕಲಿತು ,12 ನೇ ವಯಸ್ಸು ಮುಗಿಯುವಷ್ಟರಲ್ಲಿ, ಸಕಲ ಶಾಸ್ತ್ರಗಳಲ್ಲಿ ಪಾರಂಗತರಾಗಿ, 16 ತುಂಬುವುದರೊಳಗಾಗಿ, ಪ್ರಸ್ತಾನತ್ರಯಗಳಾದ ಭಗವದ್ಗೀತೆ ,ಉಪನಿಷತ್ತು ಹಾಗೂ ಬ್ರಹ್ಮಸೂತ್ರಗಳಿಗೆ ಭಾಷ್ಯ ರಚಿಸಿದ್ದಾರೆ. ಶ್ರೀ ಶಂಕರಾಚಾರ್ಯರ ಜೀವನವೇ ಒಂದು ವೇದಾಂತ ಎಂದು ಕುಮುಟಾದ ಬಾಳಿಗ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ವಿಶ್ವನಾಥ ಹಂಪಿಹೋಳಿ ಹೇಳಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಉದಯಗಿರಿಯಲ್ಲಿಜರುಗಿದ ಶಂಕರ ಜಯಂತಿ ಕುರಿತು ನಡೆದ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಾ ಶ್ರೀ ಶಂಕರಾಚಾರ್ಯರು , ತಮ್ಮ ಅಲ್ಪ ಅವಧಿಯಲ್ಲಿ, ಸಮಗ್ರ ಭಾರತವನ್ನು ಮೂರು ಬಾರಿ ಕಾಲ್ನಡಿಗೆಯಿಂದ ಸಂಚರಿಸಿ, ಅಖಂಡ ಭಾರತದ ನಾಲ್ಕೂ ದಿಕ್ಕುಗಳಲ್ಲಿ ,ನಾಲ್ಕು ಪೀಠಗಳನ್ನು ಸ್ಥಾಪಿಸಿ , ವೇದಗಳನ್ನು ಸಂರಕ್ಷಿಸುವ ಸಾಕ್ಷಿ ಪ್ರಜ್ಞೆಯ ಕಾರ್ಯ ದೂರ ದರ್ಶಿತ್ವಕ್ಕೆ ಸಾಕ್ಷಿಯಾಗಿದೆ . ಸಂಸ್ಕೃತ ಸಾಹಿತ್ಯ ಲೋಕದಲ್ಲಿ ನೀಡಿದ ದೇವತೆಗಳ ಸ್ತೋತ್ರ ಮತ್ತು ಸಾಹಿತ್ಯ ದೊಡ್ಡ ಕೊಡುಗೆಯಾಗಿದೆ . ಸನಾತನ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾಯ9ತ್ರಯರಲ್ಲಿ ಶ್ರೀ ಶಂಕರಾಚಾರ್ಯರು ಮೊದಲಿಗರು. ಭಗವದ್ಗೀತೆಯ ಗೀತಾಚಾರ್ಯ ಶ್ರೀ ಕೃಷ್ಣನ ಉಪದೇಶ , ಸಿದ್ದಾಂತ, ತತ್ವಗಳನ್ನು ಪ್ರತಿಪಾದಿಸುತ್ತಾ ಜಗತ್ತಿಗೆ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಪೂಜ್ಯ ಆಚಾರ್ಯರು ನಿತ್ಯ ಸ್ಮರಣೀಯರು, ವಂದನೀಯರು ಎಂದು ಹೇಳಿದರು.
ಕಾರ್ಯಕ್ರಮದ ಪೂರ್ವದಲ್ಲಿ ಶಂಕರಾಚಾರ್ಯ ರಚಿಸಿದ ಸೌಂದರ್ಯ ಲಹರಿ ಮುಂತಾದ ಸ್ತೋತ್ರಗಳ ಪಾರಾಯಣ ನಡೆಯಿತು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ ,ಡಿಕೆ ಜೋಶಿ, ವೆಂಕಟೇಶ ಕುಲಕರಣಿ, ಪ್ರಕಾಶ ದೇಸಾಯಿ, ಹನುಮಂತ ಪುರಾಣಿಕ , ಡಾ. ಶ್ರೀನಾಥ , ಎಲ್ ವಿ ಜೋಶಿ , ಪಾಂಡುರಂಗ ಕುಲಕರಣಿ, ಉದಯ ದೇಶಪಾಂಡೆ ,ಸಂಜೀವ ಗೋಳಸಂಗಿ, ಸಿ.ಕೆ ಕುಲಕರಣಿ, ನಾಗೇಶ್ ನರಸಾಪುರ, ವಾಮನ ಭಾದ್ರಿ , ಆನಂದ ದೇಶಪಾಂಡೆ, ಪ್ರಶಾಂತ ಕುಲಕರ್ಣಿ, ಸಂಜೀವ ಜೋಶಿ, ರಾಘವೇಂದ್ರ ಮುಂಡಗೋಡ, ಅಶೋಕ ಕುಲಕಣಿ9, ಪ್ರಕಾಶ ಬಹದ್ದೂರ್ ದೇಸಾಯಿ, ಕೇಶವ ಕುಲಕರ್ಣಿ ಮುಂತಾದ ಕುಟುಂಬದವರು ಉಪಸ್ಥಿತರಿದ್ದರು .