ಶಂಕರಾಚಾರ್ಯರ ಆದರ್ಶ ಸಮಾಜಕ್ಕೆ ಮಾದರಿ

ದೇವದುರ್ಗ,ಏ.೨೬- ಶಂಕರಾಚಾರ್ಯರು ದೇಶಾದ್ಯಂತ ಸಂಚಾರ ಮಾಡಿ ಆಧ್ಯಾತ್ಮಕ ಬೋಧನೆ ಮಾಡುವ ಮೂಲಕ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಜತೆಗೆ ಆದರ್ಶ ಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ ಎಂದು ತಹಸೀಲ್ದಾರ್ ವೈ.ಕೆ.ಬಿದರಿ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಶಂಕರಾಚಾರ್ಯರು ಭಕ್ತಿಯ ಮೂಲಕವೇ ಅನುಯಾಯಿಗಳು, ಶಿಷ್ಯರನ್ನು ಸಂಪಾದನೆ ಮಾಡಿದ್ದಾರೆ. ಅಪಾರ ಜ್ಞಾನಿಯಾಗಿದ್ದ ಶಂಕರಾಚಾರ್ಯರು, ದೇವಸ್ಥಾನ ನಿರ್ಮಾಣ ಮಾತ್ರವಲ್ಲ ಅನೇಕ ಗ್ರಂಥಗಳನ್ನು ಬರೆಯುವ ಮೂಲಕ ಸಮಾಜಕ್ಕೆ ಆಧ್ಯಾತ್ಮದ ಜ್ಞಾನ ನೀಡಿದ್ದಾರೆ. ಅವರ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.
ಕಚೇರಿ ನೌಕರರಾದ ಗೋವಿಂದ ನಾಯಕ್, ಭೀಮರಾಯ ನಾಯಕ್, ಅನಿಲ್ ಕುಮಾರ್, ಪ್ರಕಾಶ್‌ಗೌಡ, ಹರೀಶ್, ರವಿಕುಮಾರ್ ಬಲ್ಲಿದ್, ಅಭಿಷೇಕ್, ಮುಖಂಡರಾದ ಎಚ್.ಶಿವರಾಜ್ ಇತರರಿದ್ದರು.