ಶಂಕರಮಠದಲ್ಲಿ  ವಿವಿಧ ಧಾರ್ಮಿಕ ಕಾರ್ಯಕ್ರಮಗಳು.

ಸಂಜೆವಾಣಿವಾರ್ತೆ 

ಹರಪನಹಳ್ಳಿ.;ಪಟ್ಟಣದ ಜೋಯಿಸರಕೇರಿಯಲ್ಲಿರುವ ಶಂಕರಮಠದಲ್ಲಿ ಮಾ.2 ಮತ್ತು 3 ರಂದು ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶಂಕರ ಸೇವಾ ಸಮಿತಿಯ ಅಧ್ಯಕ್ಷ ಯು.ರಾಘವೇಂದ್ರ ಪ್ರಸಾದ್ ತಿಳಿಸಿದರು. ಮಾ.2 ರಂದು ಹರಿಹರಪುರ ಆದಿ ಶಂಕರಚಾರ್ಯ ಶಾರದ ಲಕ್ಷಿö್ಮÃನರಸಿಂಹ ಕ್ಷೇತ್ರದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಶೋಭಯಾತ್ರೆ ನಡೆಯಲಿದೆ.ಮಾ.3 ರಂದು ಮಠದಲ್ಲಿ ನೂತನವಾಗಿ ನವೀಕರಣಗೊಂಡ ಶ್ರೀ ಶಂಕರ ಭಗವತ್ಪಾದಾಚಾರ್ಯರ ಮೂರ್ತಿ ಹಾಗೂ ನೂತನ ಶಿಲಾ ಮಂಟಪ ಶ್ರೀ ಗುರುದೇವ ದತ್ತಾತ್ರೆಯ ನೂತನ ಶಿಲಾವಿಗ್ರಹ ಹಾಗೂ ಶ್ರೀ ಮಹಾಗಣಪತಿ ಮತ್ತು ಶಾರದಾಂಭ ದೇವಿಯ ಪುನರ್ ಪ್ರತಿಷ್ಠಾಪನೆ ಕಾರ್ಯವನ್ನು ಜರುಗಲಿದೆ ಎಂದು ಶಂಕರ ಸೇವಾ ಸಮಿತಿಯ ಎಸ್.ಶ್ಯಾಮಸುಂದರ ಭಟ್, ಲಕ್ಷಿö್ಮನಾರಾಯಣ್ ಭಟ್, ಜೆ.ಲಕ್ಷö್ಮಣ ಭಟ್, ಬಿ.ನಾಗರಾಜ, ಜಿ.ವಿ.ವೆಂಕಟೇಶ್, ಯು.ದತ್ತಾತ್ರೆಯ, ಹೆಚ್.ಲಿಂಗಮಲ್ಲಾರಿ, ಹೆಚ್.ಗೀರೀಶ್ ಸೋಮಯಾಜಿ, ಯು.ಹೆಚ್.ನರಸುಬಾಯಿ, ಎಸ್.ರೋಹಿಣಿ, ಜಿ.ವಿ.ರಾಜೇಶ್ವರಿ, ಆರ್.ಸಂದ್ಯಾ, ಹೆಚ್.ಮಂಜುಳಾ, ಯು.ಅರುಣಲತಾ, ಯು.ಹೆಚ್.ವಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.