ವ್ಹೀಲಿಂಗ್ ಮಟ್ಟಹಾಕಲು ಆಗ್ರಹ

ಕೋಲಾರ,ಮಾ.೩೦:ಎಷ್ಟೇ ಅಪಘಾತ ಗಳು ಸಂಭವಿಸಿ ಪ್ರಾಣಾಹಾನಿಯಾದ್ರೂ ಕೂಡ ನಮ್ಮ ಯುವಕರಿಗೆ ಬುದ್ದಿಬಂದಂತೆ ಕಾಣುತಿಲ್ಲ. ಬೈಕ್ ವ್ಹೀಲಿಂಗ್ ಗಳ ದುರಭ್ಯಾಸ ನಿಂತಿಲ್ಲ.
ರಾಷ್ಟ್ರೀಯ ಹೆದ್ದಾರಿಗಳಾಗಲಿ ಯಾವುದೇ ರಸ್ತೆಗಳಾಗಲಿ ವ್ಹೀಲಿಂಗ್ ಬೈಕ್ ಗುಂಪುಗಳಿವೆ. ಕೋಲಾರ ಜಿಲ್ಲೆಯಲ್ಲಿ ಸಹ ವ್ಹೀಲಿಂಗ್ ಗುಂಪುಗಳ ಕಿರಕಿರಿ ಮಿತಿಮೀರಿದೆ. ಎಲ್ಲೆಂದರಲ್ಲಿ ಬೈಕ್ ವ್ಹೀಲಿಂಗ್ ಮಾಡುವ ಯುವಕರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ತಿರುಪತಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ನರಸಾಪುರ ಕೈಗಾರಿಕಾ ವಲಯದ ಬಳಿ ಯುವಕರ ಗುಂಪು ಈ ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿ ಕಿರಿ ಮಾಡುವ ದೂರು ಬಂದಿದೆ. ಬೈಕ್ ವೊಂದರ ಮೇಲೆ ಒಂದು ಕಾಲಿನಲ್ಲಿ ನಿಂತು ಒಂದೇ ಚಕ್ರದಲ್ಲಿ ಚಲಿಸುತ್ತಾನೆ. ಈ ಎಲ್ಲಾ ದೃಶ್ಯಾವಳಿ ಮೋಬೈಲ್‌ನಲ್ಲಿ ಸೆರೆಯಾಗಿದೆ. ಇತರೆ ಅಕ್ಕಪಕ್ಕದ ವಾಹನ ಚಾಲಕರು ಆತಂಕದಲ್ಲಿಯೇ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ. ಸದ್ಯ ಜಿಲ್ಲೆಯ ಪೊಲೀಸರು ಈ ಬೈಕ್ ವ್ಹೀಲಿಂಗ್ ಪುಂಡರನ್ನು ಎಚ್ಚರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.