ವ್ಯೋಮಾವ್ಯೋಮ ಪ್ರಶಸ್ತಿ ಪ್ರದಾನ

ಕಲಬುರಗಿ ಏ 6:ಬಂಡಾಯ ಸಾಹಿತಿ ಡಾ.ಚನ್ನಣ್ಣ ವಾಲೀಕಾರ ಅವರ ಜನ್ಮದಿನೋತ್ಸವದ ಪ್ರಯುಕ್ತ ಇಂದು ಕನ್ನಡ ಭವನದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಹಿರಿಯ ಲೇಖಕ ಡಾ.ಸ್ವಾಮಿರಾವ ಕುಲಕರ್ಣಿ, ಲೇಖಕಿ ಡಾ.ಸರಸ್ವತಿ ಚಿಮ್ಮಲಗಿ, ಹಿರಿಯ ಪತ್ರಕರ್ತ ಟಿ.ವಿ.ಶಿವಾನಂದನ್, ಮತ್ತು ಜಾನಪದ ಗಾಯಕ ಶಂಭುಲಿಂಗ ವಾಲದೊಡ್ಡಿ ಅವರಿಗೆ ವ್ಯೋಮಾವ್ಯೋಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಿದ್ಧಾರ್ಥ ಪ್ರಕಾಶನ, ಕವಿರಾಜ ಮಾರ್ಗ ಪ್ರಕಾಶನ ಮತ್ತು ದಲಿತ ಬಂಡಾಯ ಸಾಹಿತ್ಯ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ
ಪೂಜ್ಯ ಲಿಂಗರಾಜಪ್ಪ ಅಪ್ಪ,ಡಾ.ಬಸವರಾಜ ಪಾಟೀಲಸೇಡಂ,ಶಂಕರಕೋಡ್ಲಾ,ಡಾ ಜಗದೇವಿ ಗಾಯಕವಾಡ,ಡಾ ಸದಾನಂದ ಪೆರ್ಲ,
ಎ.ಕೆ.ರಾಮೇಶ್ವರ,ಡಾ.ಕೆ.ಎಸ್.ಬಂಧು ಸಿದ್ದೇಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.