ವ್ಯಾಸರಾಜ ವಾದಿರಾಜರ ಆರಾಧನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.12:  ವ್ಯಾಸರಾಜ,   ವಾದಿರಾಜ ಗುರುಗಳ ಆರಾಧನಾ ಮಹೋತ್ಸವ ನಗರದ  ರೇಡಿಯೋ ಪಾರ್ಕ್ ನ ವ್ಯಾಸರಾಜ ಮಠದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಆರಾಧನಾ ನಿಮಿತ್ತವಾಗಿ  ಮಠದಲ್ಲಿ ಬೆಳಿಗ್ಗೆ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ರಜತಕವಚ ಅಲಂಕಾರ, ನೂತನ ವಸ್ತ್ರ ಧಾರಣೆ ಮಾಡಲಾಯಿತು. ನಂತರ ಪಂಡಿತರಾದ ಬಿ.ಪ್ರಲಾದ ಆಚಾರ್ಯ,  ಶ್ರೀಕಾಂತ ಆಚಾರ್ಯ ಇವರಿಂದ ವಿಶೇಷ ಉಪನ್ಯಾಸ ಗಳು ಜರುಗಿದವು.
 ವಾದಿರಾಜ,  ವ್ಯಾಸರಾಜ ಗುರುಗಳ ಭಾವಚಿತ್ರಕ್ಕೆ ಪುಷ್ಪ ಗಳಿಂದ ಅಲಂಕರಿಸಿ ರಜತ ರಥದಲ್ಲಿರಿಸಿ ರಥೋತ್ಸವ ನಡೆಸಲಾಯಿತು.
ಈ ಸಂದರ್ಭದಲ್ಲಿ  ವ್ಯಾಸರಾಜ ಮಹಿಳಾ ಭಜನಾ ಮಂಡಳಿಯಿಂದ ಕೋಲಾಟ, ನೃತ್ಯ ಹಾಗೂ ಸಾಮೂಹಿಕ ದೇವರ ಸಂಕೀರ್ತನೆ.  ವೇದಘೋಷ,ನಾನಾ ವಾದ್ಯ ಮೇಳಗಳೊಂದಿಗೆ ನಡೆಯಿತು.
ಎರಡು ದಿನ ನಡೆದ ಆರಾಧನೆ ಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಬೆಂಗಳೂರಿನ ಶ್ರೀಸಮೀರಾಚಾರ್ಯ
ಇವರಿಂದ ಸಂಗೀತ ಕಾರ್ಯಕ್ರಮದಲ್ಕಿ  ವ್ಯಾಸರಾಜರ ಕೃತಿಗಳನ್ನು ತುಂಬಾಶು ಶ್ರಾವ್ಯವಾಗಿ ಹಾಡಿದರು.
ತಿ ವಿಜಯಲಕ್ಷ್ಮೀ ಸತ್ಯ ನಾರಾಯಣ ರಾವ್ ನಿರ್ದೇಶನದ ವ್ಯಾಸರಾಯರ ಪರಂಪರೆ ಯ ರಾಜದರ್ಬಾರ ಸನ್ನಿವೇಶ ಚಿಕ್ಕಮಕ್ಕಳ ಅಭಿನಯದಲ್ಲಿ ತುಂಬಾ ಆಕರ್ಷಕವಾಗಿ ಮೂಡಿಬಂತು. ಮಹಾಮಂಗಳಾರತಿ, ಸಕಲ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ದ ವ್ಯವಸ್ಥೆ ಮಾಡಲಾಗಿತ್ತು.
ಮಠದ ಅರ್ಚಕರಾದ  ಕೆ.ಪಾಂಡುರಂಗಾಚಾರ್ಯ, ಉದಯ ಆಚಾರ್ಯ ಪೂಜಾ ಕೈಂಕರ್ಯಗಳನ್ನು   ನೇರವೇರಿಸಿದರು.  ಮಠದ ವ್ಯವಸ್ಥಾಪಕ ಅಶೋಕ್ ಕುಲಕರ್ಣಿ ಉಪಸ್ಥಿತರಿದ್ದರು.