ವ್ಯಾಸರಾಜ ಮಠದಲ್ಲಿ ತುಪ್ಪದ ದೀಪೋತ್ಸವ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.17: ಸ್ಥಳಿಯ ರೇಡಿಯೋ ಪಾರ್ಕ್ ಶ್ರೀವ್ಯಾಸರಾಜ ಮಠದಲ್ಲಿ ಕಾರ್ತೀಕ ಮಾಸದ ಉತ್ಥಾನ ದ್ವಾದಶಿ ಪರ್ವ ಕಾಲದಲ್ಲಿ‌ ಉಡುಪಿಯ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಗುರೂಜಿ ಯವರ ನೇತೃತ್ವದಲ್ಲಿ ಒಂದು ಸಾವಿರ ತುಪ್ಪದದೀಪ‌‌ ಭಕ್ತಾದಿಗಳಿಂದ ಪರಮಾತ್ಮನಿಗೆ‌ ಸಮರ್ಪಣಾ ಸಂಕಲ್ಪದಂತೆ ನಿನ್ನೆ ಸಾಯಂಕಾಲ ಜರುಗಿತು.
ಶ್ರೀಬನ್ನಂಜೆ ರಾಘವೇಂದ್ರ ತೀರ್ಥ ಗುರೂಜಿ ಯವರು ಕಾರ್ತೀಕ ಮಾಸದ ವಿಶೇಷತೆಯ ಬಗ್ಗೆ ಭಕ್ತಾಧಿಗಳಿಗೆ ವಿವರಿಸಿದರು. 
ಸಂಧರ್ಭದಲ್ಲಿ ಮಠದ  ಅರ್ಚಕರಾದ‌ ಪಾಂಡುರಂಗ ಆಚಾರ್ಯ ಹಾಗು ಮಠದ ವ್ಯವಸ್ಥಾಪಕ  ಅಶೋಕ್ ಕುಲಕರ್ಣಿ ಮತ್ತು ಅನಂತ ಆಚಾರ್ಯ,ಎಂ. ಭೀಮರಾವ್ ಕುಲಕರ್ಣಿ, ಕೃಷ್ಣ, ಶ್ರೀಹರಿ,  ವಿಜಯಲಕ್ಷ್ಮಿ ಭೀಮರಾವ್ ಕುಲಕರ್ಣಿ  , ವಿಜಯಬಾಯಿ, ಪರಿಮಳ ರಾಘವೇಂದ್ರ ಜನಕ, ಸುಮಾ, ಕವಿತಾ‌, ಸುಮಾ, ಚಂದ್ರಿಕಾ, ಸಂಧ್ಯಾರವಿ, ಜಿ.ಎಂ.ಸುಗುಣ, ಉಷಾ, ರಮಾ, ಮುಂತಾದವರು ಉಪಸ್ಥಿತರಿದ್ದರು.
ನಂತರ ತುಳಸಿಯ ಪೂಜೆ ಮಂಗಳಾರತಿ ನಡೆಯಿತು