ವ್ಯಾಪಾರ ಸ್ಥಳ ಸ್ಥಳಾಂತರ

ಗದಗ ಮೇ. 1 : ಅವಳಿನಗರದಲ್ಲಿ ಕೋವಿಡ್-19 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಪೆÇೀಲಿಸ್ ಇಲಾಖೆಯ ಸಮನ್ವಯದೊಂದಿಗೆ ಮಹೇಂದ್ರಕರ ಸರ್ಕಲ್, ಬಿ.ಎಸ್.ಎನ್.ಎಲ್ ಕಛೇರಿ, ಬಸವೇಶ್ವರ ಸರ್ಕಲ್, ಗ್ರೇನ್ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ, ಹೂ, ಹಣ್ಣು ಮಾರಾಟಗಾರರನ್ನು ಸ್ಥಳಾಂತರಿಸಿ ಭೂಮರಡ್ಡಿ ಸರ್ಕಲ್‍ದಿಂದ ಕೆ.ಎಚ್.ಪಾಟೀಲ್ ಸರ್ಕಲ್‍ವರೆಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ಸರ್ಕಾರದ ಮಾರ್ಗಸೂಚಿಗಳನ್ವಯ ಬೆಳಿಗ್ಗೆ 6 ರಿಂದ 10 ಘಂಟೆಯವರಗೆ ಮಹೇಂದ್ರಕರ ಸರ್ಕಲ್ ಬಿ.ಎಸ್.ಎನ್.ಎಲ್ ಕಛೇರಿ, ಬಸವೇಶ್ವರ ಸರ್ಕಲ್, ಗ್ರೇನ್ ಮಾರ್ಕೆಟೆನಲ್ಲಿ ಕಾಯಿಪಲ್ಲೆ, ಹೂ, ಹಣ್ಣು ಮಾರಾಟ ಮಾಡುವವರು ಭೂಮರಡ್ಡಿ ಸರ್ಕಲ್‍ದಿಂದ ಕೆ.ಎಚ್.ಪಾಟೀಲ್ ಸರ್ಕಲ್‍ವರೆಗೆ ನಿಗಧಿ ಪಡಿಸಿರುವ ಸ್ಥಳದಲ್ಲಿ ಮಾರಾಟ ಮಾಡಲು ಸೂಚಿಸಲಾಗಿದೆ. ಅದಲ್ಲದೇ ನಗರದಲ್ಲಿ ತಳ್ಳುಗಾಡಿ ಮುಖಾಂತರ ವ್ಯಾಪಾರಸ್ತರಿಗೆ ಕಾಯಿಪಲ್ಲೆ, ಹೂ, ಹಣ್ಣು ಮಾರಾಟ ಮಾಡಲು ಅವಶ್ಯಕ ಸಾಮಾಗ್ರಿಗಳ ಮಾರಾಟಕ್ಕಾಗಿ ಓಣಿಗಳಲ್ಲಿ ಹಾಗೂ ಕಿರಾಣಿ, ಇನ್ನಿತರ ವ್ಯಾಪಾರಕ್ಕಾಗಿ ಸಹ ತಮ್ಮ ತಮ್ಮ ಓಣಿಗಳಲ್ಲಿರುವ ಅಥವಾ ಸಮೀಪವಿರುವ ಅಂಗಡಿಗಳನ್ನು ಸಾಮಾಗ್ರಿಗಳ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಸಮೀಪವಿರುವ ಅಂಗಡಿಗಳಲ್ಲಿ ಹಾಗೂ ಮನೆಯ ಮುಂದೆ ಬರುವಂತಹ ತಳ್ಳುವ ಗಾಡಿಯಲ್ಲಿ ಸಾಮಾಗ್ರಿಗಳು ಮತ್ತು ಕಾಯಿಪಲ್ಲೆ, ಹೂ, ಹಣ್ಣುಗಳನ್ನು ಖರಿದಿಸತಕ್ಕದ್ದು, ಇದನ್ನು ಹೊರತು ಪಡಿಸಿ ತುಂಬಾ ಅವಶ್ಯವಿರುವ ಸಾಮಾಗ್ರಿಗಳನ್ನು ಖರಿದಿಸಬೇಕಾದಲ್ಲಿ ಮಾತ್ರ ನಗರದ ಮಾರುಕಟ್ಟೆಯಲ್ಲಿ ಖರಿದಿಸಲು ಬಯಸುವವರು ಸರ್ಕಾರದ ನಿಯಮದಂತೆ ನಿಗದಿಪಡಿಸಿದ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಜರ್ ಉಪಯೋಗಿಸಿದ ನಂತರ ಖರಿದಿಸಲು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.