ವ್ಯಾಪಾರಸ್ಥರು, ಎಫ್.ಎಸ್.ಎಸ್.ಎ.ಐ ಪರವಾನಿಗೆ ಕಡ್ಡಾಯವಾಗಿ ಪಡೆಯಬೇಕು

ಯಾದಗಿರಿ : ಜು.30: : ಯಾದಗಿರಿ ಜಿಲ್ಲೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತಾಧಿಕಾರಿಗಳಾಗಿ ಡಾ.ಅರ್ಚನಾ ಕಮಲಾಕಪೂರ್ ಅವರು ದಿನಾಂಕ 16-07-2022 ರಂದು ಪ್ರಭಾರ ವಹಿಸಿಕೊಂಡಿರುತ್ತಾರೆ. ಯಾದಗಿರಿ ಜಿಲ್ಲೆಯ ಎಲ್ಲಾ ಆಹಾರ ಪದಾರ್ಥಗಳ ತಯಾರಕರು ಸಂಸ್ಕರಣೆದಾರರು, ರಿಲೇಬಲಿಂಗ್, ವಿತರಕರು, ಸಗಟು, ಠೋಕಾ, ಹೊಟೇಲ್, ಬಾರ್ ಮತ್ತು ರೇಸ್ಟೋರೆಂಟ್, ಟೀ ಅಂಗಡಿ ಬೇಕರಿ, ಕೀರಣಾ ಅಂಗಡಿ, ಸಂಗ್ರಹಣಿದಾರರು, ದಾಬಾ, ಹಾಲಿನ ಮಾರಾಟಗಾರರು, ಮೀನು, ಮಾಂಸ, ಕೋಳಿ, ತತ್ತಿ ಅಂಗಡಿ ಮಾರಾಟಗಾರರು, ಚೀಲರೆ ಆಹಾರ ಮಾರಾಟಗಾರರು, ಬೀದಿ ಬದಿಯ ಆಹಾರ ಮಾರಾಟ ಮಾಡುವ ವ್ಯಾಪಾರಿಗಳು, ತರಕಾರಿ ಮಾರಾಟಮಾಡುವ ವ್ಯಾಪಾರಸ್ಥರು, ಹಾಗೂ ಎಲ್ಲಾ ಆಹಾರ ಪದಾರ್ಥಿಗಳ ಮಾರಾಟಗಾರರು ಆಹಾರ ಸುರಕ್ಷತೆ ಗುಣಮಟ್ಟ ಪ್ರಕಾರ ಕಡ್ಡಾಯವಾಗಿ ಎಫ್,ಎಸ್,ಎಸ್,ಎ,ಐ ಪರವಾನಿಗೆ ಪಡೆಯಬೇಕು ಮತ್ತು ಈ ಕೆಳಕಂಡ ತಪ್ಪುಗಳ ಕಂಡುಬಂದರೆ ದಂಡ ಹಾಗೂ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಯಾದಗಿರಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಜಿಲ್ಲಾ ಅಂಕಿತಾಧಿಕಾರಿ ಡಾ.ಅರ್ಚನಾ ಹಾಗೂ ಆಹಾರ ಸುರಕ್ಷತಾಧಿಕಾರಿ ಆಂಜನೇಯ ಬೈಕಾರ ಅವರು ತಿಳಿಸಿರುತ್ತಾರೆ.
ವ್ಯಾಪಾರಸ್ಥರು ಲೈಸನ್ಸ್ ಪಡೆಯದ ಆಹಾರ ಪದಾರ್ಥಗಳ ವಹಿವಾಟಿಗೆ 6 ತಿಂಗಳು ಜೈಲುವಾಸ 5 ಲಕ್ಷ ರೂ. ವರೆಗೆ ದಂಡ, ಖರೀದಿದಾರರು ಬಯಸುವ ಯೋಗ್ಯವಿಲ್ಲದ ಹಾಗೂ ಸುರಕ್ಷತೆಯಿಲ್ಲದ ಆಹಾರ ಮಾರಾಟಕ್ಕೆ 5 ಲಕ್ಷ ರೂ. ವರೆಗೆ ದಂಡ, ಗುಣಮಟ್ಟವಿಲ್ಲದ ಆಹಾರ ಮಾರಾಟಕ್ಕೆ 5 ಲಕ್ಷ ರೂ. ವರೆಗೆ ದಂಡ, ತಪ್ಪು ಮುದ್ರಿತ ಆಹಾರ ಪೊಟ್ಟಣಗಳ ಮಾರಾಟಕ್ಕೆ 3 ಲಕ್ಷ ರೂ. ವರೆಗೆ ದಂಡ, ಸುಳ್ಳು ಮಾಹಿತಿ ಮುದ್ರಿಸಿ ಜಾಹೀರಾತು ನೀಡಿ ಮಾರಾಟ 1.10ಲಕ್ಷ ರೂ. ವರೆಗೆ ದಂಡ, ಇತರೆ ವಸ್ತುಗಳ ಮಿಶ್ರಿತ ಆಹಾರ ಮಾರಾಟಕ್ಕೆ 1ಲಕ್ಷ ರೂ.ವರೆಗೆ ದಂಡ, ಸುರಕ್ಷಿತವಲ್ಲದ ಹಾಗೂ ನೈರ್ಮಲ್ಯವಿಲ್ಲದ ಸ್ಥಳದಲ್ಲಿ ಆಹಾರ ತಯಾರಿಸುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ 1 ಲಕ್ಷ ರೂ. ವರೆಗೆ ದಂಡ, ಕಲಬೆರಿಕೆ ಮಾಡುವುದಕ್ಕೆ 2.10ಲಕ್ಷ ರೂ. ವರೆಗೆ ದಂಡ, ಸೀಜ್ ಮಾಡಿದ ಆಹಾರ ಪದಾರ್ಥಗಳಲ್ಲಿ ಹಸ್ತಕ್ಷೇಪ ಮಾಡಿದರೆ 6 ತಿಂಗಳು ಜೈಲು 2 ಲಕ್ಷ ರೂ. ವರೆಗೆ ದಂಡ ಸುಳ್ಳು ಮಾಹಿತಿ ನೀಡಿದರೆ 3 ತಿಂಗಳು ಜೈಲು 2 ಲಕ್ಷ ರೂ. ವರೆಗೆ ದಂಡ, ಈ ಷರತ್ತುಗೊಳಪಟ್ಟು ಇರುತ್ತೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.